ಬ್ಯಾಡಗಿ- ಕೃಷಿ ಕಾನೂನು ಹಿಂಪಡೆದು-ಡಿಸಿಸಿ ಬ್ಯಾಂಕ್ ಸ್ಥಾಪಿಸಿ;ಮಲ್ಲಿಕಾರ್ಜುನ ಬ್ಯಾಡಗಿ: ಕೇಂದ್ರ ಸರ್ಕಾರ ಹೇರಿದ್ದ ಮೂರು
ಕೃಷಿ ಕಾನೂನು ಹಿಂಪಡೆಯುವುದೂ ಸೇರಿದಂತೆ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪನೆ ಮತ್ತು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಎಪಿಎಂಸಿಗಳನ್ನು ರದ್ದುಪಡಿಸಿ ರೈತನಿಗೆ ಮಾರಾಟದ ಹಕ್ಕು ನೀಡುವುದು, ಒಪ್ಪಂದದ ಕೃಷಿಗೆ ಅವಕಾಶ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ರೈತರ ಮೇಲೆ ಹಿಡಿತ ಸಾಧಿ ಸಲು ಹೊರಟಿತ್ತು. ಆದರೆ, ರೈತರ ಪ್ರತಿಭಟನೆ ಬಳಿಕ ಕೃಷಿ ಮೇಲಿನ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗಿತ್ತು. ಆದರೆ, ಕಳೆದ ಅವ ಧಿಯಲ್ಲಿದ್ದ ಬಿಜೆಪಿ ಸರ್ಕಾರ ಇದಾವುದನ್ನೂ ಮಾಡಿಲ್ಲ. ಹೀಗಿರುವಾಗ ನೂತನ ರಾಜ್ಯ ಸರ್ಕಾರ ಸದರಿ ಕಾಯ್ದೆಗಳನ್ನು
ಹಿಂಪಡೆಯವಂತೆ ಆಗ್ರಹಿಸಿದರು.
ಜಿಲ್ಲೆಗೆ ಬೇಕು ಡಿಸಿಸಿ ಬ್ಯಾಂಕ್: ಹಳೇ ಮೈಸೂರು ಭಾಗದಲ್ಲಿ ಪ್ರತಿ ಜಿಲ್ಲೆಗೂ ಡಿಸಿಸಿ ಬ್ಯಾಂಕ್‌ಗಳಿದ್ದು, ಉತ್ತರ ಕರ್ನಾಟಕದ
ಹೆಬ್ಟಾಗಿಲು ಹಾವೇರಿಯಲ್ಲೇ ಡಿಸಿಸಿ ಬ್ಯಾಂಕ್ ನಿರ್ಮಾಣವಾಗಿಲ್ಲ. ಕಳೆದ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯವರೇ ಮುಖ್ಯಮಂತ್ರಿಗಳಿದ್ದರೂ ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗಲಿಲ್ಲ. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ
ಅಧಿವೇಶನದಲ್ಲಿಯೇ ಡಿಸಿಸಿ ಬ್ಯಾಂಕ್ ಕಾರ್ಯ ನಿರ್ವಹಿಸಬೇಕು ಮತ್ತು 3 ಲಕ್ಷದವರೆಗಿನ ಬಡ್ಡಿ ರಹಿತ ಸಾಲ ಸೌಲಭ್ಯ ಜಿಲ್ಲೆಯ ರೈತರಿಗೆ ಪ್ರಸಕ್ತ ವರ್ಷದಿಂದಲೇ ನೀಡುವಂತೆ ಆಗ್ರಹಿಸಿದರು.
ರುದ್ರಗೌಡ ಕಾಡನಗೌಡ್ರ ಮಾತನಾಡಿ, ಇತ್ತೀಚೆಗೆ ಬಿಡುಗಡೆಯಾದ ಬೆಳೆ ವಿಮೆ ಪರಿಹಾರದ ಹಣವನ್ನು ಬ್ಯಾಂಕ್ ಅಧಿ
ಕಾರಿಗಳು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಬ್ಯಾಂಕ್ ಹಿರಿಯ ಅ ಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಾಲದ ಖಾತೆಗೆ ಜಮಾ ಮಾಡಿಕೊಳ್ಳದಂತೆ ಸೂಚಿಸಲು ಆಗ್ರಹಿಸಿದರು.
Related Articles
ಕಿರಣಕುಮಾರ ಗಡಿಗೋಳ ಮಾತನಾಡಿ, ಕಳೆದ ಬಹು ದಿನಗಳಿಂದ ರೈತರು ಮಾರಾಟ ಮಾಡಿದ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸಕ್ತ ವರ್ಷ ಮಳೆಗಾಲವೂ ಕೈಕೊಡುವ ನಿರೀಕ್ಷೆಯಲ್ಲಿದ್ದು, ಕೂಡಲೇ ರೈತರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂ ತೆ ಆಗ್ರಹಿಸಿದರು. ಈ ವೇಳೆ ಕರಬಸಪ್ಪ ಮರಗಾಲ, ಡಾ.ಕೆ.ವಿ.ದೊಡ್ಡಗೌಡ್ರ, ಮೌನೇಶ ಬಡಿಗೇರ, ಮಂಜು ತೋಟದ, ಜಾನ್ ಪುನೀತ್, ಫಕ್ಕೀರೇಶ ಅಜಗೊಂಡರ, ನಾಗಪ್ಪ ಸಪ್ಪಣ್ಣನವರ, ಲಕ್ಷ ¾ಣ ಅಮಾತಿ, ಶಿವಪ್ಪ ಮತ್ತೂರ ಶಿವರುದ್ರಪ್ಪ ಮೂಡೇರ ಇನ್ನಿತರರು ಉಪಸ್ಥಿತರಿದ್ದರು.