Advertisement

ಬ್ಯಾಡಗಿ: ಬಳ್ಳಾರಿಯ ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ

05:11 PM Oct 29, 2024 | Team Udayavani |

■ ಉದಯವಾಣಿ ಸಮಾಚಾರ
ಬ್ಯಾಡಗಿ: ಸ್ಥಳೀಯ ಪೊಲೀಸರು ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದು, ಆರೋಪಿಗಳಿಂದ 7.58 ಲಕ್ಷ ರೂ. ಮೌಲ್ಯದ
110 ಗ್ರಾಂ ತೂಕದ ಚಿನ್ನಾಭರಣ ಹಾಗೂ 390 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಕೃತ್ಯಕ್ಕೆ ಬಳಸಿದ ಬೈಕ್‌ ವಶಪಡಿಸಿಕೊಂಡಿದ್ದಾರೆ.

Advertisement

ಬಳ್ಳಾರಿ ಜಿಲ್ಲೆ ಹಾಗೂ ತಾಲೂಕು ಜಾನೆಕುಂಟೆ ತಾಂಡಾದ ಮಲ್ಲಿಕಾರ್ಜುನ ನಾಯ್ಕ ರಾಮುನಾಯ್ಕ ಹಾಗೂ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ವೆಂಕಟಗಿರಿ ತಾಂಡಾದ ವೆಂಕಟೇಶನಾಯ್ಕ ದುರ್ಗಾನಾಯ್ಕ ಎಂದು ಗುರುತಿಸಲಾಗಿದೆ. ಇದರಲ್ಲಿ ಒಬ್ಬ ಡ್ರೈವರ್‌ ಇನ್ನೊಬ್ಬ ಹೋಟಲ್‌ನಲ್ಲಿ ಮಾಣಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಕಳೆದ ಆ. 18ರಂದು ಪಟ್ಟಣದ ಮೊಟೇಬೆನ್ನೂರು ರಸ್ತೆಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಬಸವರಾಜ ಶಂಕ್ರಪ್ಪ ಸಂಕಣ್ಣನವರ ಅವರ ಮನೆ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಪ್ರಕರಣದ ಜಾಡು ಬೆನ್ನತ್ತಿದ ಸ್ಥಳೀಯ ಪೊಲೀಸರು ಎಸ್ಪಿ ಅಂಶುಕುಮಾರ, ಅಡಿಶನಲ್‌ ಎಸ್ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಎಂ.ಎಸ್‌ .ಪಾಟೀಲ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಬಳ್ಳಾರಿ ನಗರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ತನಿಖಾ ಧಿಕಾರಿಗಳಾದ ಸಿಪಿಐ ಮಹಾಂತೇಶ ಲಂಬಿ, ಹಾವೇರಿ ಗ್ರಾಮೀಣ ಸಿಪಿಐ ಸಂತೋಷ ಪವಾರ, ಪಿಎಸ್‌ಐ ಬಿ.ಎಸ್‌.
ಅರವಿಂದ, ಅಪರಾಧ ವಿಭಾಗದ ಪಿಎಸ್‌ಐ ಎನ್‌. ಕೆ. ನಿಂಗೇನಹಳ್ಳಿ ಮತ್ತು ಸಿಬ್ಬಂದಿಗಳಾದ ಪಿಎಸ್‌ಐ ಬಸವರಾಜ ಅಂಜುಟಗಿ, ಡಿ.ಎಚ್‌. ಪೂಜಾರ, ಎಫ್‌.ಎಂ. ಖಾಜಿ, ಯು.ಬಿ.ನಂದಿಗೌಡ್ರ, ಲೋಕೇಶ ಲಮಾಣಿ, ಗುಡ್ಡಪ್ಪ ಹಳ್ಳೂರು, ಅಶೋಕ ಬಾರ್ಕಿ, ರಾಜು ಗೊಂದೇರ, ಹಿದಾಯತ್‌ ದೊಡ್ಡಮುಲ್ಲಾ, ಮಂಜುನಾಥ ಬಾಳಿಕಾಯಿ, ಈರನಗೌಡ ಸೊರಟೂರು, ಉಮೇಶ ಚಿಕ್ಕಮ್ಮನವರ, ಮಾಲತೇಶ ಹೊಸರಣ್ಣನವರ, ರಾಘು ಕಾಟೇನಹಳ್ಳಿ, ಶಿವರಾಜ ಇಮ್ಮಡಿ, ಬಿ.ಎನ್‌. ಬಚ್ಚಪ್ಪಗೌಡ್ರ, ಬಿ.ಎನ್‌. ಹೂಲಿಹಳ್ಳಿ, ಎಚ್‌.ಎಂ. ಬೆಳಕೇರಿ, ಪ್ರಭು ಸಿಂದಗಿಮಠ, ವಾಹನ ಚಾಲಕರಾದ ಮಂಜುನಾಥ ಮುಚ್ಚಟ್ಟಿ, ಹನುಮಂತ ಸುಂಕದ
ತಂಡದಲ್ಲಿದ್ದರು.

ಕಳ್ಳತನ ಪ್ರಕರಣಗಳಿಂದ ಜರ್ಜಿತಗೊಂಡಿದ್ದ ಬ್ಯಾಡಗಿ ಪಟ್ಟಣದ ಜನತೆಗೆ ಕೊಂಚ ನಿರಾಳರಾಗಿದ್ದು, ಇತ್ತೀಚೆಗಷ್ಟೇ ಸರಣಿ ಮನೆ
ಕಳ್ಳತನ ಮಾಡುವ ಮೂಲಕ ಜನರ ನಿದ್ದೆಗೆಡೆಸಿದ್ದ 3 ಆರೋಪಿಗಳನ್ನು ಬಂಧಿಸಿದ್ದ ಬ್ಯಾಡಗಿ ಪೊಲೀಸರು ಆರೋಪಿಗಳಿಂದ ರೂ. 19.20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಾಹನ ವಶಪಡಿಸಿಕೊಂಡಿದ್ದನ್ನು ಸ್ಮರಿಸಿ ಕೊಳ್ಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next