Advertisement

ನಾವು ಕೇವಲ ಹೋರಾಟಕ್ಕೆ ಮಾತ್ರವಲ್ಲ, ರಾಜಕೀಯಕ್ಕೂ ಸೈ : ಬಡಗಲಪುರ ನಾಗೇಂದ್ರ

07:39 PM Nov 02, 2021 | Team Udayavani |

ಪಿರಿಯಾಪಟ್ಟಣ : ರೈತ ಹಾಗೂ ಸಾಮಾಜಿಕ ಹೋರಾಟ ಮತ್ತು ಚಳುವಳಿ ಸೇರಿದಂತೆ ಸಮಾಜಕ್ಕೆ ಧ್ವನಿಯಾಗುತ್ತಿದ್ದ ರಾಜ್ಯ ರೈತ ಸಂಘ ಮುಂದಿನ ದಿನಗಳಲ್ಲಿ ರಾಜಕೀಯ ರಂಗ ಪ್ರವೇಶಿಸುವ ಮೂಲಕ ಉತ್ತಮರ ಆಯ್ಕೆಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಸಭೆ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದ ಬೆಂಬಲಿತ ಅಭ್ಯರ್ಥಿ ಪ್ರಸನ್ನಎನ್.ಗೌಡ ರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಉತ್ತಮರು ರಾಜಕೀಯಕ್ಕೆ ಬರುವ ಮೂಲಕ ಕೊಳಕಾಗಿರುವ ರಾಜಕೀಯ ಕ್ಷೇತ್ರವನ್ನು ಶುದ್ದಿಮಾಡುವ ಕೆಲಸವಾಗಬೇಕಿದೆ. ಅನೇಕ ಹೋರಾಟಗಳ, ಚಳುವಳಿಗಳ ಫಲವಾಗಿ ಅನೇಕ ಕಾನೂನುಗಳು ರಚನೆಯಾಗಿವೆ ಆದರೆ ಶಾಸಕಾಂಗದಲ್ಲಿ ಹೋರಾಟಗಾರರ, ಚಳುವಳಿಗಾರರು ಆಯ್ಕೆಯಾಗಿ ಹೋದಾಗ ಮಾತ್ರ ಅಲ್ಲಿ ನಿಜವಾದ ನೊಂದವರ ಧ್ವನಿಯಾಗಲು ಸಹಾಯವಾಗುತ್ತದೆ. ಡಿ.ದೇವರಾಜೇ ಅರಸು ಕೂಡ ಸಮಾಜವಾದಿ ಚಳುವಳಿಯ ಫಲವಾಗಿಗೆ ಉಳುವವನೆ ಭೂಮಿಯ ಕಾನೂನು ಜಾರಿಮಾಡಿದ್ದರು. ರಾಜಕೀಯ ಶಕ್ತಿಗಾಗಿ ಸುಮಾರು 40 ಕ್ಕೂ ಹೆಚ್ಚು ರೈತಪರ ಸಂಘಟನೆಗಳಿಂದ ಬೆಂಬಲ ನೀಡಿ ದಕ್ಷಿಣ ಪಧವಿಧರ ಕ್ಷೇತ್ರಕ್ಕೆ ಪ್ರಸನ್ನ ಎನ್.ಗೌಡರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದದ್ದು ಈಗಾಗಲೇ ನಾಲ್ಕು ಜಿಲ್ಲೆಗಳಿಂದ 10 ಸಾವಿರ ವಕೀಲರು, ಹೆಚ್ಚು ಮಂಸಿ ಶಿಕ್ಷಕರು ಹಾಗೂ ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳು ಸೇರಿದಂತೆ ವಿದ್ಯಾವಂತ ನಿರುದ್ಯೋಗಿ ಪದವಿಧರರು ಪ್ರಸನ್ನಗೌಡರಿಗೆ ಬೆಂಬಲ ಸೂಚಿಸಿದ್ದು ಪಿರಿಯಾಪಟ್ಟಣ ತಾಲೂಕಿನಲ್ಲಿ 4 ಸಾವಿರ ಮತದಾರರ ನೋಂದಣಿ ಗುರಿ ಹೊಂದಲಾಗಿದೆ ಎಂದರು.

ಇದನ್ನೂ ಓದಿ : ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಜ್ ಯಾತ್ರೆಗೆ ಮತ್ತೆ ಚಾಲನೆ : ನೋಂದಣಿ ಪ್ರಕ್ರಿಯೆ ಆರಂಭ

ರಾಜ್ಯಾದ್ಯಂತ ಹೋರಾಟ:
ಮುಂಬವುರ ದಿನಗಳಲ್ಲಿ ರಾಷ್ಟ್ರದಲ್ಲಿ ರೈತರ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಂಬರ್ 26 ಕ್ಕೆ ಸಂಪೂರ್ಣ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ಡಿಸಂಬರ್ 11 ಕ್ಕೆ ಕಿಸಾನ್ ಮಹಾಪಂಚಾಯತ್ ಆಚರಿಸಲಾಗುವುದು, 1 ವಾರಗಳಕಾಲ ಪಾದಯಾತ್ರೆ, ಜನವರಿ 26 ರಂದು 1ಲಕ್ಷ ಜನ ಸೇರಿಸಿ ಜನಾಧಿವೇಶನವನ್ನು ಕರೆಯಲಾಗುವುದು, ಇದರಲ್ಲಿ ಎಪಿಎಂಸಿ ಮುಚ್ಚುತ್ತಿರುವ ಸರಕಾರದ ಕ್ರಮ ಅದರ ಪರಿಣಾಮ, ರಾಜ್ಯ ಸರಕಾರದ ಕೃಷಿ ಭೂಮಿ ಖರೀದಿಗೆ ಅವಕಾಶ ನೀಡಿದ ಪರಿಣಾಮಗಳು ಈ ಬಗ್ಗೆ ವಿಸೃತ ಚರ್ಚೆಮಾಡಿ ನಿರ್ಣಯಗಳನ್ನು ಕೈಗೊಂಡು ಹೋರಾಟ ಮಾಡಲಾಗುವುದು ಎಂದರು.

ಅಭ್ಯರ್ಥಿ ಪ್ರಸನ್ನ ಎನ್.ಗೌಡ ಮಾತನಾಡಿ ಜನಾಂದೋಲನದ ಎಲ್ಲಾ ಸಂಘಟನೆಗಳ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿರುವುದು ಸಂತೋಷದ ಸಂಘತಿಯಾಗಿದ್ದು ಈಗಾಗಲೆ 12 ಸಾವಿರ ಮತದಾರರ ನೋಂದಣಿಯನ್ನು ಮಾಡಲಾಗಿದೆ. ಅಲ್ಲದೆ ಎಲ್ಲಾ ಸಂಘಟನೆಗಳು ಕೂಡ ನಮಗೆ ಬೆಂಬಲ ನೀಡಿದ್ದು ಈ ಬಾರಿ ಚುನಾವಣೆಯಲ್ಲಿ ಗೆಲವು ಸಾಧಿಸುವ ವಿಶ್ವಾಸ ನಮಗಿದೆ ಎಂದರು.

Advertisement

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ, ತಾಲೂಕು ಅಧ್ಯಕ್ಷ ಶಿವಣ್ಣ ಶೆಟ್ಟಿ, ಪ್ರಧಾನಕಾರ್ಯದರ್ಶಿ ಸ್ವಾಮಿಗೌಡ, ಮುಖಂಡರಾದ ಸಿದ್ದೇಗೌಡ, ಪ್ರಕಾಶ್‌ರಾಜೇಅರಸ್, ಬಸವನಹಳ್ಳಿ ನಾರಾಯಣ, ಕೋಮಲಾಪುರ ಗಣೇಶ್, ಹಿಟ್ನೆಹೆಬ್ಬಾಗಿಲು ಪ್ರವೀಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next