ಮುಂಬೈ: ವಾಹನಗಳಿಗೆ ಬಳಕೆಯಾಗುವ ಸಿಎನ್ ಜಿ (ಸಂಕ್ಷೇಪಿತ ನೈಸರ್ಗಿಕ ಅನಿಲ) ಬೆಲೆ ಒಂದು ಕೆಜಿಗೆ 6 ರೂಪಾಯಿ ಹೆಚ್ಚಳವಾಗಿದೆ. ಈ ದರ ಬುಧವಾರ(ಆಗಸ್ಟ್ 03)ದಿಂದಲೇ ಜಾರಿಯಾಗಲಿದೆ. ಅದೇ ರೀತಿ ಪೈಪ್ ಮೂಲಕ ಮನೆಗಳಿಗೆ ಸರಬರಾಜಾಗುವ ಅಡುಗೆ ಅನಿಲದ ಬೆಲೆ ಒಂದು ಯೂನಿಟ್ ಗೆ 4 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ನಗರ ಅನಿಲ ವಿತರಕರ ಲಿಮಿಟೆಡ್ ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮೋತ್ಸವ ಆರಂಭಕ್ಕೂ ಮುನ್ನ ನೆರದ ಮೂರು ಲಕ್ಷಕ್ಕೂ ಅಧಿಕ ಕಾರ್ಯಕರ್ತರು: ರಾ.ಹೆ 4 ಜಾಮ್
ದೇಶೀಯವಾಗಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲದ ಬೆಲೆಯಲ್ಲಿ ಹೆಚ್ಚಳವಾದ ಪರಿಣಾಮ ದರವನ್ನು ಪರಿಷ್ಕರಿಸಲಾಗಿದೆ ಎಂದು ವರದಿ ವಿವರಿಸಿದೆ. ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜನ್ನು ಕಡಿತಗೊಳಿಸುವಂತೆ ವಿತರಕರು ಒತ್ತಾಯಿಸಿರುವುದಾಗಿ ವರದಿ ಹೇಳಿದೆ.
ಏಪ್ರಿಲ್ ಬಳಿಕ ಆರು ಬಾರಿ ನೈಸರ್ಗಿಕ ಅನಿಲ ಬೆಲೆಯಲ್ಲಿ ಹೆಚ್ಚಳ ಮಾಡಿದಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಿಂದ ದೇಶೀಯವಾಗಿ ಬೆಲೆ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿತರಕರು ತಿಳಿಸಿದ್ದಾರೆ.
ಇದೀಗ ಸಿಎನ್ ಜಿ (Compressed Natural Gas) ಬೆಲೆ ಕೆಜಿಗೆ 86 ರೂಪಾಯಿಗೆ ಏರಿಕೆಯಾಗಿದ್ದು, ಪೈಪ್ ಗಳ ಮೂಲಕ ಸರಬರಾಜು ಮಾಡುವ ಪಿಎನ್ ಜಿ ಬೆಲೆ ಕೆಜಿಗೆ 52.50 ರೂಪಾಯಿಗೆ ಏರಿಕೆಯಾಗಿದೆ ಎಂದು ಎಂಜಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.