ಬೆಂಗಳೂರು: ಅಶ್ಲೀಲ ಕಮೆಂಟ್ ಹಾಕಿ ಟ್ಯಾಗ್ ಮಾಡಿದ ವ್ಯಕ್ತಿಯ ವಿರುದ್ಧ ನಟಿ ರಮ್ಯಾ ಪ್ರಕರಣ ದಾಖಲಿಸಿದ್ದಾರೆ. ಸೆನ್ ಠಾಣೆಗೆ ನಟಿ ರಮ್ಯಾ ಖುದ್ದು ಹಾಜರಾಗಿ ದೂರು ನೀಡಿದ್ದಾರೆ.
ಇನ್‌ಸ್ಟ್ರಾಗ್ರಾಮ್ ಖಾತೆಯಲ್ಲಿ ರಮ್ಯಾ ದಿವ್ಯ ಸ್ಪಂದನಾ ಎಂಬ ಹೆಸರಿನ ಖಾತೆ ಹೊಂದಿದ್ದಾರೆ. ಇತ್ತೀ ಚೆಗೆ ಚಾರ್ಲಿ 777 ಕನ್ನಡ ಚಲನ ಚಿತ್ರ ಚೆನ್ನಾಗಿದೆ ಎಂದು ಜೂ.6 ರಂದು ರಮ್ಯಾ ಪ್ರಕಟಿಸಿದ್ದರು. ಜೂ.8ರಂದು ಪ್ರೀತಮ್ ಡಾಟ್ ಪ್ರಿನ್ಸ್ ಡಾಟ್ ಕೆ ಹೆಸರಿನ ಇನ್‌ಸ್ಟ್ರಾಗ್ರಾಂ ಖಾತೆ ಹೊಂದಿರುವ ವ್ಯಕ್ತಿ ರಮ್ಯಾ ಬಗ್ಗೆ ಅಶ್ಲೀಲ ಪದಗಳಿಂದ ಕಮೆಂಟ್ ಮಾಡಿ, ಪೋಸ್ಟ್ ಮಾಡಿ, ರಮ್ಯಾಗೆ ಟ್ಯಾಗ್ ಮಾಡಿದ್ದ. ಈ ಹಿನ್ನೆಲೆಯಲ್ಲಿ “ನನ್ನ ಮಾನಕ್ಕೆ ಧಕ್ಕೆಯುಂಟು ಮಾಡಿದ ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ’ ರಮ್ಯಾ ದೂರಿನಲ್ಲಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಜ.ಕಾಶ್ಮೀರದಲ್ಲಿ ಕೋಮು ಗಲಭೆ ಸಾಧ್ಯತೆ: ಇಂಟರ್ನೆಟ್ ಸೌಲಭ್ಯ ಕಡಿತ, ಕರ್ಫ್ಯೂ ಹೇರಿಕೆ
ಸದ್ಯ ರಮ್ಯಾ ದೂರಿನ ಅನ್ವಯ ಎಫ್ ಐಆರ್ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಸೆನ್ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸುವ ಮೊದಲು ನಟಿ ರಮ್ಯಾ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯನ್ನು ಭೇಟಿಯಾಗಿ ಕೆಲ ಹೊತ್ತು ಚರ್ಚಿಸಿದ್ದರು. ಆರೋಪಿಯನ್ನು ಬಂಧಿಸುವಂತೆ ಕಮಿಷನರ್‌ಗೂ ಮನವಿ ಮಾಡಿದ್ದಾರೆ.