ಉಡುಪಿ: ಶಾಲಾ ದಿನಗಳಿಂದಲೂ ಹಿನ್ನಡೆ ಎಂಬುದು ನಮಗೆ ಪಾಠ ಕಲಿಸುತ್ತದೆ. ನಮಗೆ ಸಿಗುವ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಛಾತಿ ಯನ್ನು ಬೆಳೆಸಿಕೊಳ್ಳಬೇಕು. ಹಿನ್ನಡೆ ಯಾವಾಗಲೂ ಪುನರಾಗಮನಕ್ಕೆ ಮುನ್ನುಡಿ ಎಂದು ಯುಎಇ ಟಾಸ್ಕ್ ಔಟ್‌ಸೋರ್ಸಿಂಗ್ ಸಂಸ್ಥೆಯ ಸ್ಥಾಪಕ, ಸಿಇಒ ಮಹೇಶ್ ಶೆಹಾದ್‌ಪುರಿ ಹೇಳಿದರು.
ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ರವಿವಾರ ನಡೆದ ಮಾಹೆ ವಿ.ವಿ.ಯ ಘಟಿಕೋತ್ಸವದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಿನ್ನಡೆಯೇ ಯಶಸ್ಸಿಗೆ ಮುನ್ನುಡಿ ಎಂಬ ಮಾತಿಗೆ ಶೆಹಾದ್‌ಪುರಿ ಅವರು ಮಣಿಪಾಲದ ಎಂಂಐಟಿ ಯಲ್ಲಿ ಪದವಿ ಪೂರೈಸಿದ ಬಳಿಕ ಕೆಲಸ ಪಡೆಯಲು ಕಷ್ಟಪಟ್ಟ ದಿನಗಳನ್ನು ಸ್ಮರಿಸಿಕೊಂಡರು. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರೂ ಎಲ್ಲಿಯೂ ಉದ್ಯೋಗಾವಕಾಶ ಸಿಗಲಿಲ್ಲ.
ಆದರೂ ಉದ್ಯೋಗ ಸಿಗುವವರೆಗೆ ನನ್ನ ಪ್ರಯತ್ನ ನಿಲ್ಲಿಸಿರಲಿಲ್ಲ. ಈ ನಡುವೆ ಬೋಸ್ಟನ್‌ನಲ್ಲಿ ಎಂಬಿಎ ಮಾಡಿದೆ. 12 ಸಂದರ್ಶನ ಎದುರಿಸಿದ ಬಳಿಕ ಇಂಟೆಲ್ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಆ ಬಳಿಕ ಸ್ವಂತ ವ್ಯವಹಾರ ಪ್ರಾರಂಭಿಸಿದೆೆ ಎಂದವರು ವಿವರಿಸಿದರು.
ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಡಾ| ಎಚ್.ವಿನೋದ್ ಭಟ್, ಕುಲಸಚಿವ ಡಾ| ನಾರಾಯಣ ಸಭಾಹಿತ್, ಸಹಕುಲಪತಿಗಳಾದ ಡಾ| ವಿ. ಸುರೇಂದ್ರ ಶೆಟ್ಟಿ, ಡಾ| ಪಿಎಲ್‌ಎನ್‌ಜಿ ರಾವ್, ಸ್ಟೂಡೆಂಟ್ಸ್ ಎಫೇರ್ ನಿರ್ದೇಶಕಿ ಡಾ| ಗೀತಾ ಮಯ್ಯ, ಎಸ್‌ಒಸಿ ನಿರ್ದೇಶಕಿ ಡಾ| ಪದ್ಮರಾಣಿ ಉಪಸ್ಥಿತರಿದ್ದರು. ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗ ಸ್ವಾಗತಿಸಿದರು. ಕೊನೆಯ ದಿನವಾದ ರವಿವಾರ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.
ಚಿನ್ನದ ಪದಕ ವಿಜೇತರು
ಡೀಗಂಟ್ (ಎಂಐಟಿ), ಸೋಹಮಿತ್ರಾ (ಬಿಡಿಎಸ್, ಮಣಿಪಾಲ) ನೈಮಾಲಾಮೊ (ಬಿಎಸ್ಸಿ ನರ್ಸಿಂಗ್, ಎಂಸಿಒಎನ್‌ಎಸ್, ಮಣಿಪಾಲ), ರೈಹಾನಾ ಅಬ್ದುಲ್ ಜಬ್ಬರ್ (ಎಂಪಿಎಚ್ ಸಾಂಕ್ರಾಮಿಕ ರೋಗಶಾಸ್ತ್ರ, ಪಿಎಸ್‌ಪಿಎಚ್ ಮಣಿಪಾಲ.)