ಬಂಟ್ವಾಳ: ಮದುವೆಯ ವಿಚಾರವಾಗಿ ಹಳೆಯ ದ್ವೇಷದ ಹಿನ್ನೆಲೆ ಯಲ್ಲಿ ಯುವಕನ ಕೈ ಕಡಿತ ಪ್ರಕರಣದ ಆರೋಪಿಯನ್ನು ಶುಕ್ರವಾರ ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಮೇ 20ರ ರಾತ್ರಿ ಬಂಟ್ವಾಳದ ಮಂಡಾಡಿಯಲ್ಲಿ ಘಟನೆ ನಡೆದಿದ್ದು, ಮಂಡಾಡಿ ನಿವಾಸಿ ಶಿವರಾಜ್ ಕುಲಾಲ್ ಅವರ ಕೈಯನ್ನು ಅವರ ಪರಿಚಯದ ಆರೋಪಿ ಸಂತೋಷ್ ಕಡಿದು ಗಾಯಗೊಳಿಸಿ ಬಳಿಕ ತಲೆಮರೆಸಿಕೊಂಡಿದ್ದ. ಬಂಟ್ವಾಳ ನಗರ ಇನ್ಸ್ಪೆಕ್ಟರ್ ವಿವೇಕಾನಂದ ನೇತೃತ್ವದಲ್ಲಿ ಎಸ್ಐ ರಾಮಕೃಷ್ಣ ಅವರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಶಿವರಾಜ್ ಮೇ 20ರ ರಾತ್ರಿ ಮನೆಯಲ್ಲಿದ್ದ ವೇಳೆ ಸಂತೋಷ್ ಕರೆ ಮಾಡಿ ಮಾತನಾಡಲು ಇದೆ ಎಂದು ಆಹ್ವಾನಿಸಿ ಅಕ್ಕನ ಮದುವೆ ವಿಚಾರ ತೆಗೆದು ಕೊಲೆ ಮಾಡಲು ಮುಂದಾಗಿದ್ದ. ಕತ್ತಿ ಬೀಸಿದ ವೇಳೆ ಕೈಗೆ ತಾಗಿ ತುಂಡಾಗಿತ್ತು. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಅಪರಾಧ ವಿಭಾಗದ ಸಿಬಂದಿ ರಾಜೇಶ್, ಇರ್ಷಾದ್ ಪೊಲೀಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.