Advertisement

Bachelor Party; ದೋಸ್ತಿಗಳ ಮೋಜು, ಮಸ್ತಿ

10:28 AM Jan 26, 2024 | Team Udayavani |

ಪಕ್ಕಾ ಯೂತ್‌ಫ‌ುಲ್‌ ಕಥೆಯೊಂದಿಗೆ ತೆರೆಗೆ ಬರುತ್ತಿರುವ ಸಿನಿಮಾ “ಬ್ಯಾಚುಲರ್‌ ಪಾರ್ಟಿ’. ಪರಂವಃ ಸ್ಟುಡಿಯೋಸ್‌ ಲಾಂಛನದಲ್ಲಿ ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರವನ್ನು ಅಭಿಜಿತ್‌ ಮಹೇಶ್‌ ನಿರ್ದೇಶನ ಮಾಡದ್ದಾರೆ.

Advertisement

ಚಿತ್ರದಲ್ಲಿ ದಿಗಂತ್‌, ಲೂಸ್‌ ಮಾದ ಯೋಗಿ, ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲಾಕ್‌ ಡೌನ್‌ ಸಮಯದಲ್ಲಿ ಹುಟ್ಟಿದ ಕಥೆ ಸಿನಿಮಾವಾದ ಖುಷಿ ಅಭಿಜಿತ್‌ ಮಹೇಶ್‌ ಅವರದು. “ಇದೊಂದು ಪಕ್ಕಾ ಎಂಟರ್‌ ಟೈನರ್‌ ಸಿನಿಮಾ. ಪ್ರೇಕ್ಷಕರು ಕೊಡುವ ದುಡ್ಡಿಗೆ ಖಂಡಿತ ಮೋಸ ಆಗುವುದಿಲ್ಲ’ ಎನ್ನುವುದು ಅವರ ವಿಶ್ವಾಸದ ಮಾತು.

ಇನ್ನು ತಮ್ಮ “ಬ್ಯಾಚುಲರ್‌ ಪಾರ್ಟಿ’ ಬಗ್ಗೆ ನಟರಾದ ದಿಗಂತ್‌, ಲೂಸ್‌ಮಾದ ಯೋಗಿ, ಅಚ್ಯುತಕುಮಾರ್‌ ಎಲ್ಲರಿಗೂ ಕೊಂಚ ನಿರೀಕ್ಷೆ ಹೆಚ್ಚಾಗಿಯೇ ಇದೆ. ಅದಕ್ಕೆ ಕಾರಣ ಸಿನಿಮಾದ ಸಬ್ಜೆಕ್ಟ್ ಎಂಬುದು ಎಲ್ಲರ ಒಕ್ಕೊರಲ ಮಾತು. ಸಿನಿಮಾದ ಶೂಟಿಂಗ್‌ ಮಾಡುವಾಗಲೇ ನಾವು ಸಿನಿಮಾದ ಡೈಲಾಗ್ಸ್‌, ದೃಶ್ಯಗಳನ್ನು ಕೇಳಿ ಸಾಕಷ್ಟು ನಕ್ಕಿರುವುದಿದೆ. ಅದೇ ನಗು ಥಿಯೇಟರ್‌ ನಲ್ಲಿ ಪ್ರೇಕ್ಷಕರ ಮುಖದಲ್ಲೂ ಮೂಡಲಿದೆ ಎಂಬ ವಿಶ್ವಾಸದ ಮಾತು ಚಿತ್ರತಂಡದ್ದು.

“ಬ್ಯಾಚುಲರ್‌ ಪಾರ್ಟಿ’ ಸಿನಿಮಾಕ್ಕೆ ಅರವಿಂದ್‌ ಛಾಯಾಗ್ರಹಣವಿದೆ. ಅಭಿಜಿತ್‌ ಮಹೇಶ್‌ ಹಾಗೂ ವೀರೇಶ್‌ ಶಿವಮೂರ್ತಿ ಸಾಹಿತ್ಯವಿರುವ ಸಿನಿಮಾದ ಹಾಡುಗಳಿಗೆ ಅರ್ಜುನ್‌ ರಾಮು ಸಂಗೀತ ಸಂಯೋಜಿಸಿದ್ದಾರೆ. ಥೈಲ್ಯಾಂಡ್‌, ಬ್ಯಾಂಕಾಕ್‌, ಬೆಂಗಳೂರು ಸುತ್ತಮುತ್ತ “ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next