ವಾಷಿಂಗ್ಟನ್: ಮನೆಯ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 6 ತಿಂಗಳ ಮಗು, ತಾಯಿ ಸೇರಿದಂತೆ 6 ಮಂದಿ ಬಲಿಯಾದ ಘಟನೆ ಕ್ಯಾಲಿಫೋರ್ನಿಯಾದ ಗೋಶೆನ್ ನಲ್ಲಿ ನಡೆದಿದೆ.
ಅಪರಿಚಿತರ ಗುಂಡಿನ ದಾಳಿಯಲ್ಲಿ 6 ತಿಂಗಳ ಹಸುಳೆ, 17 ವರ್ಷದ ತಾಯಿ ಸೇರಿದಂತೆ ಮನೆಯಲ್ಲಿದ್ದ ಇತರ ನಾಲ್ವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ʼಜಾಗತಿಕ ಭಯೋತ್ಪಾದಕʼ ಪಟ್ಟಿಗೆ ಮೋಸ್ಟ್ ವಾಂಟೆಡ್ ಅಬ್ದುಲ್ ರೆಹಮಾನ್ ಮಕ್ಕಿ: ಚೀನಾಕ್ಕೆ ಮುಖಭಂಗ
ಸೋಮವಾರ ಮುಂಜಾನೆ 3:30 ರ ಸಮಯದಲ್ಲಿ ಈ ದಾಳಿ ನಡೆದಿದ್ದು, ಗುಂಡಿನ ದಾಳಿಯನ್ನು ನೋಡಿ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ನೋಡಿದಾಗ ಮಗು, ತಾಯಿ ಸೇರಿದಂತೆ ಇತರರು ರಕ್ತದ ಮಡುವಿನ ಬಿದ್ದಿದ್ದರು.
Related Articles
ಇದೊಂದು ಉದ್ದೇಶಿತ ದಾಳಿ, ಡ್ರಗ್ ಸಂಬಂಧಿಸಿದ ದಾಳಿ ಇರಬಹುದೆಂದು ಪೊಲೀಸರು ಹೇಳಿದ್ದಾರೆ. ಘಟನಾ ಸಂಬಂಧ ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.