Advertisement

ನಿದ್ರಿಸುತ್ತಿದ್ದ ಮಗು ಕಾಣಿಸದ್ದಕ್ಕೆ ಊರೆಲ್ಲ ಸುತ್ತಿದ್ದ ದಂಪತಿ!

10:48 AM May 13, 2023 | Team Udayavani |

ಬೆಂಗಳೂರು: ಮನೆಯಲ್ಲಿ ಆರಾಮವಾಗಿ ನಿದ್ದೆಗೆ ಜಾರಿದ್ದ ಆರು ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ಪೋಷಕರು ಊರೆಲ್ಲ ಸುತ್ತಿದ್ದಲ್ಲದೇ ಪೊಲೀಸ್‌ ಠಾಣೆಗೂ ದೂರು ನೀಡಿ, ಭಾರೀ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ.

Advertisement

ಮೀನಾ ದಂಪತಿ ಗುರುವಾರ ರಾತ್ರಿ 7.30ಕ್ಕೆ ಕೆ.ಆರ್‌.ಪುರ ಪೊಲೀಸ್‌ ಠಾಣೆಗೆ ಬಂದು “ತಮ್ಮ 6 ವರ್ಷದ ಮಗಳನ್ನು ಅಪಹರಿಸಲಾಗಿದೆ. ಮನೆ ಮುಂದೆ ಆಟವಾಡುತ್ತಿದ್ದವಳು ಏಕಾಏಕಿ ಕಾಣೆಯಾಗಿದ್ದಾಳೆ’ ಎಂದು ದೂರು ನೀಡಿದ್ದರು. ಇತ್ತ ಪೊಲೀಸರು ಕೂಡ ಅಪಹರಣ ಪ್ರಕರಣ ದಾಖಲಿಸಿಕೊಂಡು ಮಗುವಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಸಬ್‌ ಇನ್‌ಸ್ಪೆಕ್ಟರ್‌ ರಮ್ಯಾ ಹಾಗೂ ಠಾಣೆಯ ಸಿಬ್ಬಂದಿ ಎಲ್ಲೆಡೆ ಮಗುವಿಗಾಗಿ ಶೋಧ ನಡೆಸಿದ್ದರೂ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ.

ಕೊನೆಗೆ ಕೆ.ಆರ್‌.ಪುರದ ಜನತಾ ಕಾಲೋನಿಯಲ್ಲಿರುವ ಮಗುವಿನ ಮನೆಯಲ್ಲಿ ಹುಡುಕಲು ಆರಂಭಿಸಿದಾಗ ಬಟ್ಟೆ ಕೆಳಗೆ ಮಗು ನಿದ್ದೆಗೆ ಜಾರಿರುವುದು ಪತ್ತೆಯಾಗಿತ್ತು. ಕೂಡಲೇ ಪಾಲಕರನ್ನು ಕರೆಸಿ ವಿಚಾರಿಸಿದಾಗ ನಡೆದ ಸಂಗತಿ ತಿಳಿದು ಪೊಲೀಸರೇ ಒಂದು ತಬ್ಬಿಬ್ಟಾಗಿದ್ದಾರೆ.

ಬಟ್ಟೆ ಕೆಳಗೆ ನಿದ್ದೆಗೆ ಜಾರಿದ್ದ ಮಗು: ಮನೆಯಲ್ಲಿ ಆಟವಾಡುತ್ತಿದ್ದ ಮಗು ಬೆಡ್‌ ಮೇಲೆ ನಿದ್ದೆಗೆ ಜಾರಿದ್ದಳು. ಆಕೆಯ ತಾಯಿ ಮೀನಾ ಒಣಗಿದ್ದ ಬಟ್ಟೆಗಳನ್ನು ಮಗುವಿನ ಮೇಲೆ ತಂದು ಹಾಕಿ ದ್ದರು. ಆದರೆ, ಬೆಡ್‌ನ‌ಲ್ಲಿ ಮಗಳು ಮಲಗಿದ್ದನ್ನು ಮೀನಾ ನೋಡಿರಲಿಲ್ಲ. ಮಗುವೂ ಎಚ್ಚರಗೊಡಿ ರಲಿಲ್ಲ. ಕೆಲ ಹೊತ್ತಿನ ಬಳಿಕ ಮಗಳು ಮನೆಯಲ್ಲಿ ಕಾಣಿಸಲಿಲ್ಲ. ಎಷ್ಟೇ ಕೂಗಿದರೂ ಮಗಳು ಕಾಣಿಸದಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಪಾಲಕರು ನೇರವಾಗಿ ಕೆ.ಆರ್‌.ಪುರ ಠಾಣೆಗೆ ಬಂದು ದೂರು ಕೊಟ್ಟಿದ್ದರು. ಪೊಲೀಸರೂ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ಮಗು ಪತ್ತೆಯಾಗಿದೆ. ಮಗಳನ್ನು ಕಂಡ ಪಾಲಕರು ನಿರಾಳರಾಗಿ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next