ವರ್ಷಾಂತ್ಯದಲ್ಲಿ ಸಿನಿಮಾ ಬಿಡುಗಡೆ ಭರಾಟೆ ಜೋರಾಗಿದ್ದ ಸ್ಯಾಂಡಲ್‌ವುಡ್‌ನಲ್ಲಿ ವರ್ಷಾರಂಭ ಕೊಂಚ ಮಂಕಾಗಿದೆ. ಜನವರಿಯಲ್ಲಿ ಸಿನಿಮಾ ಬಿಡುಗಡೆ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ವಾರ ಎರಡು ಚಿತ್ರಗಳಷ್ಟೇ ತೆರೆಕಾಣುತ್ತಿದೆ. “ಹುಷಾರ್’ ಹಾಗೂ “ಬೇಬಿ ಮಿಸ್ಸಿಂಗ್’ ಚಿತ್ರಗಳು ತೆರೆಗೆ ಬರುತ್ತಿದೆ.
ಸತೀಶ್ ರಾಜ್ ನಿರ್ಮಿಸಿ, ನಿರ್ದೇಶಿಸಿರುವ “ಹುಷಾರ್’ ಚಿತ್ರದಲ್ಲಿ ಸಿದ್ದೇಶ್, ಆದ್ಯಪ್ರಿಯ, ಪುಷ್ಪಸ್ವಾಮಿ, ಬುಲೆಟ್ ವಿನೋದ್, ಡಿಂಗ್ರಿ ನಾಗರಾಜ್, ರಚನಾ ಮಲ್ನಾಡ್ ನಟಿಸಿದ್ದಾರೆ.
ಇನ್ನು “ಬೇಬಿ ಮಿಸ್ಸಿಂಗ್’ ಚಿತ್ರದಲ್ಲಿ ಯಶಸ್ವಿಕಾಂತ್ ನಿರ್ಮಾಣದ ಜವಾಬ್ದಾರಿ ಜೊತೆ ನಾಯಕನಾಗಿ ಅಭಿನಯಿಸಿದ್ದು, ಚಿತ್ರರಂಗದ ಹೊಸಮುಖ ರಕ್ಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಶಶಿಕುಮಾರ್, ಅವಿನಾಶ್, ಸ್ಪರ್ಶ ರೇಖಾ, ಕಡ್ಡಿ ಪುಡಿ ಚಂದ್ರು ಮನಮೋಹನ್ ರಾಯ್, ಅರುಣಾ, ಬೇಬಿ ಐಸಿರಿ ಜೈನ್ ದೊಡ್ಡ ತಾರಾ ದಂಡೇ ಇದೆ.