Advertisement

ನೀರು ಕುಡಿಯಲು ಹೋಗಿ ತೊಟ್ಟಿಯೊಳಗೆ ಬಿದ್ದ ಕಾಡಾನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ

10:16 PM Nov 22, 2020 | sudhir |

ಮಳವಳ್ಳಿ: ನೀರು ಕುಡಿಯಲು ಬಂದ ಮರಿ ಆನೆಯೊಂದು ನೀರಿನ ತೊಟ್ಟಿಯೊಳಗೆ ಮುಳುಗಿದ್ದನ್ನು ಕಂಡು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಟ್ಟಿರುವ ಘಟನೆ ತಾಲ್ಲೂಕಿನ ಹೊಸದೊಡ್ಡಿ ಗ್ರಾಮದ ಮಣಿಗಾರನಕಟ್ಟೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

Advertisement

ಭಾನುವಾರ ಬೆಳಗಿನ ಸಮಯದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಕಾಡಾನೆಗಳ ಗುಂಪು ಗೀಳಿಡುತ್ತಿದ್ದ ಸದ್ದು ಕೇಳಿಸಿತು. ಇದನ್ನು ಆಲಿಸಿದ ಸಿಬ್ಬಂದಿ ಹುಡುಕಿಕೊಂಡು ಹೋದಾಗ ಮಾದನಾಯಕ ಜಮೀನಿನ ಪಕ್ಕ ಇರುವ ನೀರಿನ ತೊಟ್ಟಿಯೊಂದರಲ್ಲಿ ಮರಿ ಕಾಡಾನೆ ಬಿದ್ದಿರುವುದನ್ನು ರಕ್ಷಿಸಲು ಕಾಡಾನೆಗಳ ಗುಂಪು ಪ್ರಯತ್ನ ಪಡುತ್ತಿದ್ದವು. ಬೆಳಕು ಹರಿಯುತ್ತಿದ್ದಂತೆ ಕಾಡಾನೆಗಳು ಕಾಡಿನೊಳಗೆ ಹೋದ ನಂತರ ಜೆಸಿಬಿ ಮೂಲಕ ತೊಟ್ಟಿ ಹೊಡೆದು ಹಾಕಿ ಆನೆ ಮರಿಯನ್ನು ರಕ್ಷಣೆ ಮಾಡಿ ಕಾಡಿಗೆ ಅಟ್ಟಲಾಯಿತು.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಮಹಾದೇವಸ್ವಾಮಿ ಮತ್ತು ಅರಣ್ಯ ರಕ್ಷಕ ಸಿದ್ದರಾಮ ಪೂಜಾರಿ, ಪೂಜಾರಿ, ಶ್ರೇಯಸ್, ರಾಜಕುಮಾರ, ಸುಮಂತ್, ಲೋಕೇಶ್, ಪ್ರದೀಪ್, ಕೆಂಚಪ್ಪ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next