Advertisement

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಯಾರೂ ಅಲ್ಲಾಡಿಸಲಾಗದು: ಬಾಬುರಾವ್ ಚಿಂಚನಸೂರ್

10:31 AM Jul 31, 2022 | Team Udayavani |

ಬೆಂಗಳೂರು: ವಿಧಾನ ಪರಿಷತ್ ಗೆ ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರನ್ನು ಭೇಟಿಯಾದರು. ಇಂದು ಕುಟುಂಬ ಸಮೇತ ಆರ್‌ಟಿ ನಗರ ನಿವಾಸಕ್ಕೆ ಆಗಮಿಸಿದ ಚಿಂಚನಸೂರ್  ಸಿಎಂ ಬೊಮ್ಮಾಯಿ ಜೊತೆ ಚರ್ಚೆ ನಡೆಸಿದ್ದಾರೆ.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುರಾವ್ ಚಿಂಚನಸೂರ್, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಾನು ಐದು ಬಾರಿ ಗೆಲುವು ಸಾಧಿಸಿದ್ದೆ. ಆ ಭಾಗದಲ್ಲಿ ನಮ್ಮ ಕೋಲಿ ಸಮಾಜ ಶೇ 45 ರಷ್ಟಿದೆ. ನನ್ನನ್ನು ಗುರುತಿಸಿ ಪಕ್ಷ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿದೆ. ಇನ್ನು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಯಾರು ಅಲ್ಲಾಡಿಸಲು ಆಗುವುದಿಲ್ಲ ಎಂದರು.

ಇದನ್ನೂ ಓದಿ:ಸಂಜಯ್ ರಾವತ್ ಮನೆ ಮೇಲೆ ಇಡಿ ದಾಳಿ: ‘ಸತ್ತರೂ ಶರಣಾಗುವುದಿಲ್ಲ’ ಎಂದ ಶಿವಸೇನೆ ಸಂಸದ

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ತುಂಬ ಬಲಿಷ್ಠವಾಗಿದೆ. ಮುಂದಿನ ಬಾರಿ ಗುರುಮಿಟ್ಕಲ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಚಿಂಚನಸೂರ್, ಮುಂದೆ ಪ್ರಿಯಾಂಕ ಖರ್ಗೆ ಅವರ ಎದುರು ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ಅವರ ಕಥೆಯಲ್ಲಾ ಇನ್ನು ಮುಗಿಯಿತು. ಇನ್ನು ಮುಂದೆ ನೋಡುತ್ತಿರಿ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next