ನವದೆಹಲಿ:ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ (ಸೆಪ್ಟೆಂಬರ್ 30, 2020)ದಂದು ಪ್ರಕಟಿಸಲಿದ್ದು, ಈ ಸಂದರ್ಭದಲ್ಲಿ ಎಲ್ಲಾ ಆರೋಪಿಗಳು ಕೋರ್ಟ್ ನಲ್ಲಿ ಹಾಜರಿರಬೇಕೆಂದು ಜಡ್ಜ್ ಎಸ್ ಕೆ ಯಾದವ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್ ಮತ್ತು ಸಾಧ್ವಿ ರಿತಂಬರಾ ಸೇರಿದಂತೆ 32 ಮಂದಿ ಆರೋಪಿಗಳಿದ್ದಾರೆ.
ವರದಿಯ ಪ್ರಕಾರ, ಹಿರಿಯ ರಾಜಕಾರಣಿಗಳಾದ ಎಲ್ ಕೆ ಆಡ್ವಾಣಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ಎಂಎಂ ಜೋಶಿ, ಸತೀಶ್ ಪ್ರಧಾನ್, ನೃತ್ಯಗೋಪಾಲ್ ದಾಸ್ ಸೇರಿದಂತೆ ಹಲವು ಪ್ರಮುಖರು ಸೆಪ್ಟೆಂಬರ್ 30 ಕೋರ್ಟ್ ಕಲಾಪಕ್ಕೆ ಗೈರುಹಾಜರಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಏತನ್ಮಧ್ಯೆ ಚಂಪತ್ ರಾಯ್, ಬ್ರಿಜ್ ಭೂಷಣ್ ಸಿಂಗ್, ಪವನ್ ಪಾಂಡೆ ಲಲ್ಲು ಸಿಂಗ್, ಸಾಕ್ಷಿ ಮಹಾರಾಜ್, ಸಾಧ್ವಿ ರಿತಂಬರಾ , ಆಚಾರ್ಯ ಧರ್ಮೇಂದ್ರ ದೇವ್, ರಾಮಚಂದ್ರ ಖತ್ರಿ, ಸುಧೀರ್ ಕಕ್ಕಾರ್, ಒಪಿ ಪಾಂಡೆ, ಜೈ ಭಗವಾನ್ ಗೋಯಲ್, ಅಮರನಾಥ್ ಗೋಯಲ್ ಮತ್ತು ಸಂತೋಷ್ ದುಬೆ ಕೋರ್ಟ್ ಗೆ ಹಾಜರಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.