Advertisement

Pakistan ಏಕದಿನ, ಟಿ20 ತಂಡಕ್ಕೆ ಬಾಬರ್‌ ಆಜಂ ಮತ್ತೆ ನಾಯಕ

10:42 PM Mar 31, 2024 | Team Udayavani |

ಕರಾಚಿ: ಪಾಕಿಸ್ಥಾನದ ಏಕದಿನ ಮತ್ತು ಟಿ20 ಕ್ರಿಕೆಟ್‌ ತಂಡಗಳಿಗೆ ಪ್ರಮುಖ ಬ್ಯಾಟರ್‌ ಬಾಬರ್‌ ಆಜಂ ಮತ್ತೆ ನಾಯಕರಾಗಿ ನೇಮಕಗೊಂಡಿದ್ದಾರೆ. ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ರವಿವಾರ ಈ ವಿಚಾರವನ್ನು ಟ್ವೀಟ್‌ ಮೂಲಕ ಘೋಷಿಸಿದೆ. ಕೆಲವು ತಿಂಗಳ ಹಿಂದಷ್ಟೆ ಬಾಬರ್‌ ಅವರನ್ನು ಏಕದಿನ ಮತ್ತು ಟಿ20 ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.

Advertisement

ಟ್ವೀಟ್‌ ಮಾಡಿರುವ ಪಿಸಿಬಿ, ಆಯ್ಕೆ ಸಮಿತಿಯ ಸರ್ವಾನುಮತದ ಶಿಫಾರಸಿನ ಮೇರೆಗೆ, ಪಿಸಿಬಿ ಅಧ್ಯಕ್ಷ ಮೋಹ್ಸಿನ್‌ ನಖೀÌ ಅವರು ಬಾಬರ್‌ ಆಜಂ ಅವರನ್ನು ಮತ್ತೆ ಏಕದಿನ, ಟಿ20 ನಾಯಕರಾಗಿ ಆರಿಸಿದ್ದಾರೆ ಎಂದು ಬರೆದುಕೊಂಡಿದೆ. 2023ರ ವಿಶ್ವಕಪ್‌ನಲ್ಲಿ ಪಾಕ್‌ ತಂಡ ನೀರಸ ಪ್ರದರ್ಶನ ನೀಡಿದ ಬಳಿಕ, ಬಾಬರ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಶಾನ್‌ ಮಸೂದ್‌ಗೆ ಟೆಸ್ಟ್‌ ನಾಯಕತ್ವ ಮತ್ತು ಯುವ ವೇಗಿ ಶಾಹೀನ್‌ ಅಫ್ರಿದಿಗೆ ಟಿ20 ನಾಯಕತ್ವ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next