ವಿಜಯಪುರ: ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ವಿವಿಧ ಕ್ಷೇತ್ರಗಳಲ್ಲಿ ಚುನಾವಣೆ ಸಮೀಕ್ಷೆ ನಡೆಸಿರುವ ಸಂಸ್ಥೆಗಳು, ಸೋಲು-ಗೆಲುವಿನ ಸಂಭವನೀಯತೆಯನ್ನು ಹೊರ ಹಾಕುತ್ತಿವೆ. ಇದರ ಭಾಗವಾಗಿ ಜಿಲ್ಲೆಯ ಬಬಲೇಶ್ವರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಪುನರಾಯ್ಕೆ ಖಚಿತ ಎಂದು ಸಮೀಕ್ಷೆಯೊಂದು ಹೇಳಿದೆ.
ಈ ವಿಷಯವನ್ನು ಸ್ವಯಂ ಟ್ವೀಟ್ ಮಾಡಿರುವ ಬಬಲೇಶ್ವರ ಕ್ಷೇತ್ರದ ಶಾಸಕರೂ, ಸಂಭವನೀಯ ಅಭ್ಯರ್ಥಿಯೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ನ್ಯಾಶನಲ್ ಸರ್ವೇ ಏಜನ್ಸಿ ನಡೆಸಿದ ಸಮೀಕ್ಷೆಯಲ್ಲಿ ಶೇ.55 ರಷ್ಟು ಬೆಂಬಲದೊಂದಿಗೆ ವಿಜಯ ಸಾಧಿಸುವುದಾಗಿ ಹೇಳಿದೆ.
ಅಭಿವೃದ್ಧಿ ಹಾಗೂ ಪ್ರಭಾವಿ ನಾಯಕತ್ವ ಹಾಗೂ ಜಾತಿ ಸಮೀಕರಣವೂ ಎಂ.ಬಿ.ಪಾಟೀಲ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಮೀಕ್ಷೆ ವಿವರಿಸಿದೆ. ಅಲ್ಲದೇ ಬಬಲೇಶ್ವರ ಕ್ಷೇತ್ರದಲ್ಲಿ ಆಡಳಿತ ಬಿಜೆಪಿ ಪಕ್ಷಕ್ಕೆ ಶೆ.39 ಬೆಂಬಲ ದೊರೆಯಲಿದೆ ಎಂದೂ ಸಮೀಕ್ಷೆ ಹೇಳಿದೆ. ಜೆಡಿಎಸ್ ಶಕ್ತಿ ಇಲ್ಲಿ ಶೇ.2 ರಷ್ಟಿದೆ ಎಂದು ಸಮೀಕ್ಷೆ ವಿವರಿಸಿದರು.
ಇದನ್ನೂ ಓದಿ: ಹೊಸ ರಾಜ್ಯ ರಚನೆಗೆ ಸರ್ಕಾರದ ಪರಿಗಣನೆಯಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ: ಕೇಂದ್ರ ಸರ್ಕಾರ