ಮುಂಬೈ: ಸುಮಾರು ಎರಡು ತಿಂಗಳ ಹಿಂದೆ ಹತ್ಯೆಗೀಡಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿರುವ ಆರೋಪಿಗಳ ವಿಚಾರಣೆ ನಡೆಯುತ್ತಿರುವ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.
ಸಿದ್ದಿಕ್ ಹಂತಕರ ವಿಚಾರಣೆ ವೇಳೆ ಸಿದ್ದಿಕಿ ಅವರನ್ನು ಕೊಲ್ಲುವ ಮೊದಲು ನಟ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಯೋಜನೆ ನಡೆಸಿತ್ತು ಆದರೆ ಸಲ್ಮಾನ್ ಖಾನ್ ಗೆ ಹೆಚ್ಚಿನ ಭದ್ರತೆ ಇದ್ದ ಕಾರಣ ಆ ಕೆಲಸ ಆಗಲಿಲ್ಲ ಹಾಗಾಗಿ ಸಿದ್ದಿಕಿ ಅವರನ್ನು ಟಾರ್ಗೆಟ್ ಮಾಡಿದೆವು ಎಂದು ಪೊಲೀಸರ ವಿಚಾರಣೆ ವೇಳೆ ಆರೋಪಿಗಳಲ್ಲಿ ಓರ್ವ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎನ್‌ಸಿಪಿ ಬಾಬಾ ಸಿದ್ದಿಕ್ ಅವರನ್ನು ಕಳೆದ ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಅವರ ಮಗ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಎರಡು ಗುಂಡುಗಳು ಸಿದ್ದಿಕ್ ಅವರ ಎದೆ ಸೀಳಿದ್ದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆತಂದರೂ ಯಾವುದೇ ಪ್ರಯೋಜನವಾಗಲಿಲ್ಲ ಸಿದ್ದಿಕ್ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಹಲವು ತಂಡ ರಚಿಸಿ ಮಂದಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುವ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: IMDb: ಈ ವರ್ಷದ ಟಾಪ್ 10 ಮೋಸ್ಟ್ ಪಾಪ್ಯುಲರ್ ಇಂಡಿಯನ್ ಸ್ಟಾರ್ಸ್ ಇವರೇ ನೋಡಿ..