Advertisement

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

09:19 PM Oct 16, 2024 | Team Udayavani |

ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಕೊಲೆ ಆರೋಪಿಗಳು ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದರು ಎಂಬುದು ಮುಂಬೈ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

Advertisement

ಪ್ರಮುಖ ಆರೋಪಿ ಶಿವಕುಮಾರ್‌ ಗೌತಮ್‌ ಉತ್ತರಪ್ರದೇಶದಲ್ಲಿ ಹಲವು ಶುಭಸಂದರ್ಭಗಳಲ್ಲಿ ಗುಂಡು ಹಾರಿಸುವುದನ್ನು ನೋಡಿ ಗನ್‌ಗಳ ನಿರ್ವಹಣೆ ಕಲಿತಿದ್ದ. ಪ್ರಮುಖ ಶೂಟರ್‌ ಆಗಿದ್ದ ಗೌತಮ್‌, ಮತ್ತಿಬ್ಬರು ಆರೋಪಿಗಳಾದ ಗುರ್ಮೈಲ್‌ ಸಿಂಗ್‌ ಹಾಗೂ ಧರ್ಮರಾಜ್‌ ಕಶ್ಯಪ್‌ಗೆ ಗನ್‌ ಬಳಸಲು ತರಬೇತಿ ನೀಡುತ್ತಿದ್ದ. ಇದಕ್ಕಾಗಿ ಆರೋಪಿಗಳು 20 ದಿನ ಗಳ ಹಿಂದಷ್ಟೇ ಕುರ್ಲಾದ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು.

ಇದಲ್ಲದೇ ಗನ್‌ಗಳನ್ನು ಲೋಡ್‌ ಹಾಗೂ ಅನ್‌ಲೋಡ್‌ ಮಾಡುವುದನ್ನು ಅವರು ಯೂಟ್ಯೂಬ್‌ ನೋಡಿ ಸುಮಾರು 4 ವಾರಗಳು ಅಭ್ಯಾಸ ಮಾಡಿದ್ದರು. ಪಂಜಾಬ್‌ ನಿಂದ ಇವರಿಗೆ 9 ಎಂಎಂ ವಿದೇಶಿ ನಿರ್ಮಿತ ಪಿಸ್ತೂಲನ್ನು ಕಳುಹಿಸಿಕೊಡಲಾಗಿತ್ತು. ಮನೆ ಶೋಧದ ವೇಳೆ ಪೊಲೀಸರಿಗೆ ಅಲ್ಪಪ್ರಮಾಣದ ಗಾಂಜಾ ದೊರೆತಿದೆ. ಸಿದ್ದಿಕಿ ಪುತ್ರ ಝೀಶಾನ್‌ ಕಚೇರಿ ಬಳಿ ಆರೋಪಿಗಳು ಪ್ರತಿ ರಾತ್ರಿ ಬೇಹುಗಾರಿಕೆ ನಡೆಸಿ, ಯೋಜನೆ ರೂಪಿಸಿದ್ದರು.

ಕೊಲೆಗೆ ಯೋಜನೆ ರೂಪಿಸಿದ ಶುಭಂ ಲೊಂಕಾರ್‌ ಎಂಬಾತ ಈ ಹಿಂದೆ ನಟ ಸಲ್ಮಾನ್‌ ಖಾನ್‌ ಮನೆ ಬಳಿಯ ಗುಂಡಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಎಲ್ಲ ಆರೋಪಿಗಳು ಸಾಕ್ಷ್ಯ ಉಳಿಯಬಾರದೆಂಬ ಕಾರಣಕ್ಕೆ ಇನ್‌ಸ್ಟಾಗ್ರಾಂ ಹಾಗೂ ಸ್ನ್ಯಾಪ್‌ಚಾಟ್‌ ಮೂಲಕ ಸಂಪರ್ಕ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next