Advertisement

ಪತಂಜಲಿ ಸಂಸ್ಥೆಯ ಆದಾಯದಲ್ಲಿ ಏರಿಕೆ

09:48 AM Nov 20, 2019 | Hari Prasad |

ಹೊಸದಿಲ್ಲಿ: ಬಾಬಾ ರಾಮದೇವ್‌ ಅವರ ಪತಂಜಲಿ ಆಯುರ್ವೇದ ಸಂಸ್ಥೆ  ಏಪ್ರಿಲ್ – ಸೆಪ್ಟೆಂಬರ್‌ ತಿಂಗಳ ತ್ತೈಮಾಸಿಕದಲ್ಲಿ ಸುಮಾರು 3,562 ಕೋಟಿ ರೂ.ಗಳ ಆದಾಯವನ್ನು ಗಳಿಸಿದ್ದು, ಕಳೆದ ಬಾರಿಗಿಂತ ಒಂದು ಪಟ್ಟು ಆದಾಯ ಹೆಚ್ಚಾಗಿದೆ ಎಂದು ಸಂಸ್ಥೆ  ಮಂಗಳವಾರ ತಿಳಿಸಿದೆ.

Advertisement

ಕಂಪನಿಯು ಜೂನ್‌ ತ್ತೈಮಾಸಿಕದಲ್ಲಿ ಮತ್ತು 2018-19ರ ಸೆಪ್ಟೆಂಬರ್‌ ತ್ತೈಮಾಸಿಕದಲ್ಲಿ  ಕ್ರಮವಾಗಿ 937 ಕೋಟಿ ರೂ. ಮತ್ತು 1,576 ಕೋಟಿ ರೂ. ಆದಾಯಗಳಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದ ಆದಾಯ ಮಟ್ಟದಲ್ಲಿ  ಏರಿಕೆಯಾಗಿದೆ.

ಈ ಹಿಂದೆ ಇತರ ಕಂಪನಿಗಳಿಗೆ ವಹಿಸಲಾಗಿದ್ದ  ಉತ್ಪನ್ನಗಳ ನಿರ್ವಹಣೆಯನ್ನು  ಈ ಬಾರಿ ಕಂಪನಿಯೇ ನಿಭಾಯಿಸಿದ್ದು, ಈ ಆದಾಯ ಕೇವಲ ಆಯುರ್ವೇದದ ಉತ್ಪನ್ನಗಳನ್ನು ಮಾತ್ರ ಒಳಗೊಂಡಿದೆ.

ದಾಖಲೆ ಮಟ್ಟದ ಆದಾಯವನ್ನು ಗಳಿಸುವ ಮೂಲಕ ಪತಂಜಲಿ ವಿಶಿಷ್ಟ ಸಾಧನೆ ಗೈದಿದ್ದು, ತನ್ನ ಇತಿಹಾಸದಲ್ಲಿಯೇ ಅತ್ಯಧಿಕ ಎಚ್‌ 1 ಅಂಕಿಅಂಶವನ್ನು ಹೊಂದಿದೆ ಎಂದು ಪತಂಜಲಿ ವಕ್ತಾರ ಎಸ್‌ ಕೆ ತಿಜರಾವಾಲಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next