Advertisement

Baba ರಾಮ್‌ದೇವ್‌ಗೆ ಮತ್ತೆ ಹಿನ್ನಡೆ: ಸೇವಾ ಶುಲ್ಕದಿಂದ ಇಲ್ಲ ವಿನಾಯಿತಿ

12:21 AM Apr 22, 2024 | Team Udayavani |

 

Advertisement

ಹೊಸದಿಲ್ಲಿ: ವಸತಿ ಮತ್ತು ವಸತಿರಹಿತ ಯೋಗ ಶಿಬಿರ ಗಳಿಗೆ ಪ್ರವೇಶ ಶುಲ್ಕ ವಿಧಿಸುವ ಪತಂಜಲಿ ಯೋಗ ಪೀಠ ಟ್ರಸ್ಟ್‌ ಸೇವಾ ತೆರಿಗೆ ಪಾವತಿಸಬೇಕು ಎಂದು ಅಲಹಾಬಾದ್‌ನ ಕಸ್ಟಮ್ಸ್‌, ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ನ್ಯಾಯಾಧಿಕರಣವು 2023ರ ಅ.5ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಪತಂಜಲಿ ಯೋಗಪೀಠ ಟ್ರಸ್ಟ್‌ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನ್ಯಾ|ಅಭಯ್‌ ಎಸ್‌. ಒಕಾ ಮತ್ತು ಉಜ್ಜಲ್‌ ಭುಯಾನ್‌ ಅವರಿದ್ದ ನ್ಯಾಯ ಪೀಠ, ಟ್ರಸ್ಟ್‌ನ ಅರ್ಜಿ ಯನ್ನು ತಿರಸ್ಕರಿಸಿದೆ. ಅಲ್ಲದೇ ಸೇವಾ ಶುಲ್ಕದಿಂದ ರಿಯಾಯಿತಿ ಇಲ್ಲ ಎಂದಿದೆ. ಅಕ್ಟೋಬರ್‌ 2006 ರಿಂದ 2011ರ ಮಾರ್ಚ್‌ವರೆಗೆ ಪತಂಜಲಿ ಟ್ರಸ್ಟ್‌ ಒಟ್ಟು 4.5 ಕೋಟಿ ರೂ. ಸೇವಾ ತೆರಿಗೆ (ಬಡ್ಡಿ ಮತ್ತು ದಂಡ ಸೇರಿ) ಪಾವತಿಸಬೇಕು ಎಂದು ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next