Advertisement

ರೈತರನ್ನು ಉಗ್ರರಿಗೆ ಹೋಲಿಸಿದರೆ ಸುಮ್ಮನಿರಲಾಗದು: ಬಾಬಾಗೌಡ ಪಾಟೀಲ ಕಿಡಿ

12:14 PM Dec 02, 2020 | sudhir |

ಧಾರವಾಡ: ಕೃಷಿಗೆ ಮಾರಕವಾಗುವ ಕಾನೂನುಗಳನ್ನು ವಿರೋಧಿಸುವ ರೈತರನ್ನು ಉಗ್ರಗಾಮಿಗಳು ಎನ್ನುತ್ತಿರುವ ಕೇಂದ್ರ
ಸರ್ಕಾರದ ನಡೆಯನ್ನು ನೋಡಿ ರಾಜ್ಯದ ರೈತರು ಸುಮ್ಮನಿರಲಾಗದು ಎಂದು ರೈತ ಮುಖಂಡ ಕೇಂದ್ರದ ಮಾಜಿ ಸಚಿವ
ಬಾಬಾಗೌಡ ಪಾಟೀಲ ಕಿಡಿಕಾರಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಚಳವಳಿ ಕುರಿತು ಬಿಜೆಪಿ ಮುಖಂಡರು ಅಸಂಬದ್ಧ ಹೇಳಿಕೆ ನೀಡುತ್ತಿದ್ದು,
ಭಾರತ ಸರ್ಕಾರ ಷಂಡ ಸರ್ಕಾರವೇ? ಚಳವಳಿ ನಡೆಸುತ್ತಿರುವವರನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸುತ್ತಿದ್ದಾರೆ. ಸುಮ್ಮನೆ ಆರೋಪ ಮಾಡದೇ ತಾಕತ್ತಿದ್ದರೆ ಉಗ್ರರನ್ನು ಬಂಧಿಸಬೇಕೆ ಹೊರತು ರೈತರನ್ನು ಉಗ್ರರಿಗೆ ಹೋಲಿಸಿದರೆ ಸುಮ್ಮನೆ ಕೂರಲಾಗದು ಎಂದು ಎಚ್ಚರಿಸಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಸ್ಟ್‌ ಇಂಡಿಯಾ ಕಂಪನಿ ಅಪ್ಪನಂತೆ ವರ್ತಿಸುತ್ತಿದ್ದು, ಜಾರಿಗೆ ತರುವ
ಕೃಷಿ ಸಂಬಂಧಿಸಿದ ಮೂರು ಕಾನೂನುಗಳು ರೈತ ವಿರೋಧಿಯಾಗಿವೆ. ಈ ಕಾನೂನು ಹಿಂಪಡೆಯುವಂತೆ ದೆಹಲಿಯಲ್ಲಿ ರೈತರು
ನಡೆಸುತ್ತಿರುವ ಚಳವಳಿಗೆ ಕೇಂದ್ರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡದೆ ಸರ್ವಾಧಿಕಾರ ಧೋರಣೆ ತೋರುತ್ತಿದೆ ಎಂದರು.

ಇದನ್ನೂ ಓದಿ:ಮಂಗಳೂರು ಬೋಟ್ ದುರಂತ: ಇಬ್ಬರ ಮೃತದೇಹ ಪತ್ತೆ, ಇನ್ನೂ ಇಬ್ಬರಿಗಾಗಿ ಹುಡುಕಾಟ

ಕಾನೂನುಗಳ ಜಾರಿಯಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಪ್ರಧಾನಮಂತ್ರಿ, ಡಿ. 3ರಂದು ರೈತರಿಗೆ ಕಾನೂನುಗಳ ಕುರಿತು
ಮನವರಿಕೆ ಮಾಡಲು ಸಭೆ ನಡೆಸುತ್ತಿದ್ದಾರೆ.

Advertisement

ತಮ್ಮ ನಿಲುವು ಬದಲಿಸಿಕೊಳ್ಳದ, ರೈತರ ಚಳವಳಿಗೆ ಮಾನ್ಯತೆ ನೀಡದ ಮಾತುಕತೆ ಹೋರಾಟಗಾರರಿಗೂ ಬೇಡ. ಒಕ್ಕಲುತನ
ಮಾಡದ, ರೈತರ ಬವಣೆ ತಿಳಿಯದ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪರವಾಗಿಲ್ಲ. ರೈತರಿಗೆ ಖಾಸಗಿ ಕಂಪನಿಗಳು
ಹೇಗೆ ಮೋಸ ಮಾಡುತ್ತಾರೆ ಎಂಬ ಅರಿವು ಅವರಿಗಿಲ್ಲ. ಹೀಗಾಗಿ ರೈತರ ಹೋರಾಟಕ್ಕೆ ಕರ್ನಾಟಕದ ಎಲ್ಲ ರೈತರ ಸಂಪೂರ್ಣ
ಬೆಂಬಲವಿದ್ದು, ಡಿ.4ರಿಂದ ಧಾರವಾಡದ ಡಿಸಿ ಕಚೇರಿ ಎದುರು ರೈತರಿಂದ ಧರಣಿ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಉತ್ತಮ ಬೆಲೆ ಸಿಗಲಿದೆ. ಖಾಸಗಿ ಉದ್ಯಮಿಗಳಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ ಕಡಿಮೆ ಬೆಲೆಗೆ ರೈತರಿಂದ ಖರೀದಿಸಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದೇ ಇದರ ಉದ್ದೇಶ. ರೈತರನ್ನು ಖಾಸಗಿ ಕಂಪನಿಗಳ ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ಹೊಂದಲಾಗಿದೆ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ದೇವರು, ಭೀಮಪ್ಪ ಕಸಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next