Advertisement

“ನಾನು ಕಥೆಗಳನ್ನು ಬರೆಯುವುದಿಲ್ಲ, ಅವುಗಳನ್ನು ಕದಿಯುತ್ತೇನೆ.. ಬಾಹುಬಲಿ ಚಿತ್ರಕಥೆಗಾರ

05:57 PM Nov 22, 2022 | Team Udayavani |

ಪಣಜಿ:  “ನಾನು ಬರಹಗಾರನಾಗುವ ಮೊದಲು ಕೃಷಿ ಸೇರಿದಂತೆ ಜೀವನೋಪಾಯಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇನೆ. ನನ್ನ ಜೀವನದಲ್ಲಿ ಬರವಣಿಗೆ ಬಹಳ ನಂತರವಾಗಿ ಬಂತು ಎಂದು ಚಿತ್ರಕಥೆಗಾರ ವಿ.ವಿಜಯೇಂದ್ರ ಪ್ರಸಾದ್ ಹೇಳಿದರು.

Advertisement

53ನೇ ಇಫಿ ಚಿತ್ರೋತ್ಸವದ ಕಾರ್ಯಕ್ರಮದಲ್ಲಿ ನಡೆದ ಬರವಣಿಗೆ ಸಂಬಂಧಿತ ವಿಶೇಷ ಕಾರ್ಯಗಾರದಲ್ಲಿ  ಮಾತನಾಡಿದ ಅವರು “ಯಾವಾಗಲೂ ತನ್ನ ಕಥೆಗಾಗಿ ಪ್ರೇಕ್ಷಕರಲ್ಲಿ ಹಸಿವನ್ನು ಸೃಷ್ಟಿಸಲು ಪ್ರಯತ್ನಿಸುತ್ತೇನೆ. ಇದರಿಂದ ನನ್ನ ಪಾತ್ರಗಳನ್ನು ಭಿನ್ನವಾಗಿ ಬರೆಯಲು ಸಾಧ್ಯವಾಗುತ್ತದೆ. ನೀವು ಕಥೆ ಬರೆಯುವಾಗ ಏನಿಲ್ಲದಿರುವುದಿಂದಲೇ ಏನನ್ನಾದರೂ ಸೃಷ್ಟಿಸಬೇಕು. ನೀವು ಸುಳ್ಳನ್ನು ಸತ್ಯವಾಗಿ ಕಾಣುವಂತೆ ಪ್ರಸ್ತುತಪಡಿಸಬೇಕು. ಒಳ್ಳೆಯ ಸುಳ್ಳನ್ನು ಹೇಳಬಲ್ಲವನು ಒಳ್ಳೆಯ ಕಥೆಗಾರನಾಗಬಹುದು ಎಂದು ಹೇಳಿದರು.

“ನಾನು ಕಥೆಗಳನ್ನು ಬರೆಯುವುದಿಲ್ಲ, ಅವುಗಳನ್ನು ಕದಿಯುತ್ತೇನೆ. ನಿಮ್ಮ ಸುತ್ತಮುತ್ತಲು ಕಥೆಗಳಿವೆ. ರಾಮಾಯಣ. ಮಹಾಭಾರತ, ನಿಜ ಜೀವನದ ಕಥೆಗಳು ಎಲ್ಲೆಡೆ ಇವೆ. ಅವುಗಳನ್ನು ನಾವು ಪ್ರತಿನಿಧಿಸಿ ವಿಭಿನ್ನವಾದ ಶೈಲಿಯಲ್ಲಿ ಬರೆಯಬೇಕು” ಎಂದು ಹೇಳಿದರು.

ಬಾಹುಬಲಿ, ಆರ್‌ ಆರ್‌ ಆರ್‌ ಕಥೆ ಬರೆದ ಅನುಭವದ ಬಗ್ಗೆ ಮಾತಾನಾಡಿದ ಅವರು,” ನನ್ನ ತಲೆಯಲ್ಲಿ ಎಲ್ಲವೂ ಇರುತ್ತದೆ. ಪಾತ್ರ, ಅದರ ತಿರುವು, ಅದರ ಏರಿಳಿತ. ನಾನು ಬರೆಯವುದಿಲ್ಲ ನಾನು ಕಥೆಯನ್ನು ಹೇಳುತ್ತೇನೆ. ಒಳ್ಳೆಯ ಬರಹಗಾರ, ನಿರ್ದೇಶಕ, ನಿರ್ಮಾಪಕ, ಪ್ರಾಥಮಿಕ ನಾಯಕ ಮತ್ತು ಪ್ರೇಕ್ಷಕರ ಅಗತ್ಯಗಳನ್ನು ಪೂರೈಸಬೇಕುʼ ಎಂದಿದ್ದಾರೆ.

ವಿ.ವಿಜಯೇಂದ್ರ ಪ್ರಸಾದ್ ಸದ್ಯ ಆರ್.ಆರ್.ಆರ್‌ ಎರಡನೇ ಭಾಗದ ಕಥೆಯ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next