Advertisement
ಕೆ.ಆರ್.ಪುರದ ಐಟಿಐ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು. ನಂತರ ವೇದಿಕೆಯಿಂದ ಇಳಿದು ನೇರವಾಗಿ ಹಿರಿಯ ನಾಗರಿಕರು, ಅಂಗವಿಕಲರ ಬಳಿಗೆ ತೆರಳಿ ಅಹವಾಲು ಸ್ವೀಕರಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೆ 4 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದರು.
Related Articles
Advertisement
ಸ್ವಾಧೀನಪಡಿಸಿಕೊಂಡ ಜಾಗಕ್ಕೆ 5 ವರ್ಷ ಆದ್ರೂ ಪರಿಹಾರ ಸಿಕ್ಕಿಲ್ಲ? : ಕೆ.ಆರ್.ಪುರದಲ್ಲಿನ 80 ಅಡಿ ರಸ್ತೆ ಅಗಲೀಕರಣದ ವೇಳೆ ಜಾಗ ಕಳೆದುಕೊಂಡಿದ್ದು, 5 ವರ್ಷದಿಂದ ಪರಿಹಾರಕ್ಕೆ ಅಲೆದಾಡುತ್ತಿರುವೆ ಎಂದು ಭಾಗ್ಯಮ್ಮ ಎಂಬುವರು ಕಣ್ಣೀರಾದರು. ಪಕ್ಕದಲ್ಲೇ ಇದ್ದಂತಹ ಶಾಸಕ ಬೈರತಿ ಬಸವರಾಜು ಅವರಿಗೆ “ಕೂಡಲೇ ಈ ಸಮಸ್ಯೆ ಬಗೆಹರಿಸಿ’ ಎಂದು ಡಿಸಿಎಂ ಸೂಚಿಸಿದರು. ಹೊಸಕೋಟೆಯಲ್ಲಿ ಜೂನಿಯರ್ ಲೈನ್‌ಮನ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಎಂ.ಜಿ.ಹರೀಶ್ ಕಂಬದಿಂದ ಬಿದ್ದು ಸ್ವಾಧೀನ ಕಳೆದುಕೊಂಡಿದ್ದಾರೆ ಎಂದು ಅವರ ಪತ್ನಿ ಮನವಿ ಸಲ್ಲಿಸಿದಾಗ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆದೇಶಿಸಿದರು.
ಶಾಸಕರೇ ಇದು ನಿಮ್ಮ ಸಮಸ್ಯೆಬೇಗ ಬಗೆಹರಿಸಿಕೊಳ್ಳಿ: ಡಿಕೆಶಿ : ಕೆ.ಆರ್.ಪುರಂ ಶಾಸಕರಾದ ಬೈರತಿ ಬಸವರಾಜು ಅವರ ಸಂಬಂಧಿ ವೇಣು ಎಂಬುವರು ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ತೊಂದರೆ ಕೊಡುತ್ತಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಗೆ 3 ಬಾರಿ ದೂರು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಬೈರತಿ ಬಸವರಾಜು ಸಮ್ಮುಖದಲ್ಲೇ ಖಾದರ್ ಮೊಹಿದ್ದೀನ್ ಎಂಬುವರು ಡಿ.ಕೆ.ಶಿವಕುಮಾರ್ ಬಳಿ ಆರೋಪಿಸಿದರು. “ಶಾಸಕರೇ ಇದು ನಿಮ್ಮ ಸಮಸ್ಯೆ ಬೇಗ ಬಗೆಹರಿಸಿಕೊಳ್ಳಿ’ ಎಂದು ಬೈರತಿ ಬಸವರಾಜುಗೆ ಡಿಸಿಎಂ ಸೂಚಿಸಿದರು.
ಅಹವಾಲುಗಳ ತ್ವರಿತ ವಿಲೇವಾರಿಗೆ ನೋಡಲ್ ಅಧಿಕಾರಿಗಳ ನಿಯೋಜನೆ : ಜನರ ಅಹವಾಲುಗಳನ್ನು ತ್ವರಿತ ವಿಲೇವಾರಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗು ವುದು ಎಂದು ಡಿಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು. ಈ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿ, ಎಲ್ಲ ಅರ್ಜಿಗಳನ್ನು ಒಂದೇ ದಿನ ಪರಿಹಾರ ಮಾಡಲು ಆಗುವುದಿಲ್ಲ. ಕುಡಿಯುವ ನೀರು, ರಸ್ತೆ, ಒಳಚರಂಡಿ, ಸ್ವಚ್ಛತೆ ಕುರಿತ ದೂರು ಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು. ಬೇರೆ ಮನವಿಗಳನ್ನು ಹಂತವಾಗಿ ಬಗೆಹರಿಸಲಾಗು ವುದು. ಇದರ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿ ಗಳನ್ನು ನೇಮಿಸಲಾಗುವುದು ಎಂದು ವಿವರಿಸಿದರು. ನಾಳೆ, ನಾಡಿದ್ದು ಕಾರ್ಯಕ್ರಮ ಮುಂದುವರಿಕೆ: ಇಡೀ ತಿಂಗಳು ಈ ಕಾರ್ಯಕ್ರಮವನ್ನು ಬೆಂಗಳೂರು ನಗರದಲ್ಲಿ ಮುಂದುವರಿಸುತ್ತೇವೆ. ಜ.5ರಂದು ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರದಲ್ಲಿ ಇದೆ. 6ರಂದು ಪುಲಕೇಶಿನಗರ, ಶಿವಾಜಿನಗರ, ಹೆಬ್ಟಾಳದಲ್ಲಿ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
1 ಲಕ್ಷ ರೂ. ಲಂಚ ಪಡೆದ ಸಿಬ್ಬಂದಿ ಅಮಾನತಿಗೆ ಸ್ಥಳದಲ್ಲೇ ಸೂಚನೆ:
ಬಿಬಿಎಂಪಿಯಲ್ಲಿ ಕೆಲಸ ಮಾಡುವ ವಿನಯ್, ವೆಂಕಟೇಶ್ ಎಂಬುವರು ಎ ಖಾತೆ ಮಾಡಿಸಿಕೊಡುತ್ತೇವೆ ಎಂದು 1 ಲಕ್ಷ ರೂ. ಲಂಚ ಪಡೆದು ಮೋಸ ಮಾಡಿದ್ದಾರೆ. ನ್ಯಾಯ ಕೊಡಿಸಿ ಎಂದು ಟಿ.ಸಿ.ಪಾಳ್ಯ ಆನಂದ ನಗರದ ರೀತಮ್ಮ ಎಂಬುವರು ಅಳಲು ತೋಡಿಕೊಂಡರು. ಕೂಡಲೇ ಲಂಚ ಪಡೆದ ನೌಕರರನ್ನು ಅಮಾನತು ಮಾಡಬೇಕು, ಅವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಬೇಕು ಎಂದು ಬಿಬಿಎಂಪಿ ಕಮಿಷನರ್‌ಗೆ ಸೂಚಿಸಿದರು.
ಸ್ಥಳದಲ್ಲೇ ಡಿಸಿಎಂ ಅಮಾನತಿಗೆ ಸೂಚಿಸಿರುವುದನ್ನು ಕಂಡು ನೆರೆದಿದ್ದ ಸಭಿಕರು ಶಿಳ್ಳೆ, ಚಪ್ಪಾಳೆಗಳ ಸುರಿಮಳೆಗೈದರು.
ಅಧಿಕಾರಿಗಳ ದಂಡೇ ಹಾಜರು: ಶಾಸಕರಾದ ಬೈರತಿ ಬಸವರಾಜ್, ಮಂಜುಳಾ ಅರವಿಂದ ಲಿಂಬಾ ವಳಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಪ್ರೊ.ರಾಜೀವ್ ಗೌಡ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮುನೀಶ್ ಮೌದ್ಗೀಲ್, ಬಿಎಂಆರ್‌ಡಿಎ ಆಯುಕ್ತ, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ಬಿಡಿಎ ಆಯುಕ್ತ ಜಯರಾಮ್, ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್, ಬಿಡಬ್ಲ್ಯೂಎಸ್‌ಎಸ್‌ಬಿ ಎಂಡಿ ರಾಮಪ್ರಸಾದ್ ಮನೋಹರ್, ಬಿಎಂಟಿಸಿ ಎಂಡಿ ಸತ್ಯವತಿ ಮತ್ತಿತರ ಹಿರಿಯ ಅಧಿಕಾರಿಗಳ ದಂಡೇ ಕಾರ್ಯಕ್ರಮಲ್ಲಿ ಹಾಜರಿತ್ತು.