Advertisement

Baaghi 4: ಹರ್ಷ ʼಬಾಘಿ-4ʼ ಅಖಾಡಕ್ಕೆ ವಿಲನ್‌ ಆಗಿ ಎಂಟ್ರಿಯಾದ ಸಂಜು ಬಾಬಾ

12:07 PM Dec 09, 2024 | Team Udayavani |

ಮುಂಬಯಿ: ಟೈಗರ್‌ ಶ್ರಾಫ್‌ (Tiger Shroff)  ಅಭಿನಯದ ʼಬಾಘಿ-4ʼ  (Baaghi 4) ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟ್‌ ಇತ್ತೀಚೆಗೆ ರಿವೀಲ್‌ ಆಗಿ ಸೌಂಡ್‌ ಮಾಡಿದೆ. ಇದೀಗ ಮತ್ತೊಂದು ಪ್ರಧಾನ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.

Advertisement

ಈ ಸಿನಿಮಾಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಎ.ಹರ್ಷ (A. Harsha) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಾಗಿ ಕನ್ನಡಿಗರಲ್ಲೂ ʼಭಾಘಿ-4ʼ ಕುತೂಹಲವನ್ನು ಹುಟ್ಟಿಸಿದೆ. ʼವಜ್ರಕಾಯʼ, ʼಭಜರಂಗಿʼ, ʼಭಜರಂಗಿ-2ʼ, ʼವೇದʼ ಅಂತಹ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ ಸದ್ದು ಮಾಡಿರುವ ಹರ್ಷ ಬಾಲಿವುಡ್‌ಗೆ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಡಲಿದ್ದಾರೆ.

ಇದನ್ನೂ ಓದಿ: Bollywood Movies:2025ರಲ್ಲಿ ತೆರೆಕಾಣಲಿರುವ ಬಹು ನಿರೀಕ್ಷಿತ ಬಾಲಿವುಡ್‌ ಸಿನಿಮಾಗಳ ಪಟ್ಟಿ

ಟೈಗರ್‌ ಶ್ರಾಫ್‌ (Tiger Shroff) ರಕ್ತಸಿಕ್ತವಾಗಿದ್ದ ಫಸ್ಟ್‌ ಲುಕ್‌ ಪೋಸ್ಟರ್‌ ಇತ್ತೀಚೆಗೆ ರಿಲೀಸ್‌ ಆಗಿತ್ತು. ಇದೀಗ ಸಿನಿಮಾದಲ್ಲಿ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿರುವ ಮತ್ತೊಂದು ಪಾತ್ರದ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ.

Advertisement

ಉದ್ದ ಕೂದಲನ್ನು ಬಿಟ್ಟು, ಕಾಲಿನ ಮೇಲೆ ರಕ್ತದ ಮಡುವಿನಲ್ಲಿರುವ ಪ್ರಿಯತಮೆಯನ್ನು ಹಿಡಿದುಕೊಂಡಿರುವ ಗರ್ವದ ಲುಕ್‌ ನಲ್ಲಿ ಸಂಜಯ್‌ ದತ್‌ (Sanjay Dutt) ಕಾಣಿಸಿಕೊಂಡಿದ್ದಾರೆ.

“ಪ್ರತಿಯೊಬ್ಬ ಪ್ರಿಯಕರ ಒಬ್ಬ ವಿಲನ್”‌ ಎಂದು ಕ್ಯಾಪ್ಷನ್‌ ನೀಡಲಾಗಿದೆ. ಈ ಪೋಸ್ಟರ್‌ ನೋಡಿ ಸಂಜು ಬಾಬಾ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಸಾಜಿದ್ ನಾಡಿಯಾದ್ವಾಲಾ ʼಭಾಘಿ-4ʼ ಗೆ ಬಂಡವಾಳ ಹಾಕಲಿದ್ದಾರೆ.  2025ರ ಸೆ.5ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ

Advertisement

Udayavani is now on Telegram. Click here to join our channel and stay updated with the latest news.

Next