Advertisement
ಸುದ್ದಿಗಾರರ ಜತೆ ಮಾತನಾಡಿ, ಸಚಿವ ಜಮೀರ್ ಅಹ್ಮದ್ ಕರಿಯ ಹೇಳಿಕೆ ಕೊಡಬಾರದಿತ್ತು. ಅವರದ್ದು ಏನೇ ಪ್ರೀತಿ, ವಿಶ್ವಾಸ ಇರಲಿ. ಆ ರೀತಿ ಹೇಳಬಾರದಿತ್ತು, ಹೇಳಿದ್ದಾರೆ. ಕುಮಾರಸ್ವಾಮಿ ಕೂಡ ಕೊಚ್ಚೆ ಎಂದು ಹೇಳಿದ್ದಾರೆ. ಅದೂ ಸರಿಯಲ್ಲ ಎಂದರು.
ಬಾಗಲಕೋಟೆ: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಶೇ. 40ರಷ್ಟು ಭ್ರಷ್ಟಾಚಾರ ಇದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದರು. ಅದರ ಆಧಾರದ ಮೇಲೆ ಲೋಕಾಯುಕ್ತರು ತನಿಖೆ ನಡೆಸಿ ವರದಿ ಕೊಟ್ಟಿದ್ದಾರೆ. ನಾನು ಆ ವರದಿಯನ್ನು ಇನ್ನೂ ನೋಡಿಲ್ಲ. ಕೆಲವೊಮ್ಮೆ ಸಾಕ್ಷಿಗಳ ಕೊರತೆಯಿಂದ ಹಿನ್ನಡೆಯಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಯಾರದ್ದಾದರೂ ಕೊಲೆ ಆಗಿರುತ್ತದೆ. ಆ ಮೇಲೆ ಅವರು ಆ ಪ್ರಕರಣದಿಂದ ಖುಲಾಸೆ ಆಗುತ್ತಾರೆ. ಹಾಗೆಂದ ಮಾತ್ರಕ್ಕೆ ಕೊಲೆ ಆಗಲೇ ಇಲ್ಲ ಅಂತಲ್ಲ. ನಾನೂ ಒಬ್ಬ ವಕೀಲ ಆಗಿದ್ದವನು. ಅನೇಕ ಕೇಸ್‌ಗಳು ಸಾಕ್ಷಿ ಇಲ್ಲದೇ ವಜಾ ಆಗಿರುತ್ತವೆ ಎಂದರು.