Advertisement

‘ಬಾಹುಬಲಿ’ರೂಪದಲ್ಲಿ ಬಿ.ವೈ.ವಿಜಯೇಂದ್ರ: ಅಂಜನಾದ್ರಿ ಬೆಟ್ಟದಲ್ಲಿ ಕಲರ್ ಫುಲ್ ಬ್ಯಾನರ್ಸ್

11:49 AM Feb 20, 2021 | Team Udayavani |

ಗಂಗಾವತಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಾಹುಬಲಿಯಂತೆ ಚಿತ್ರಿಸಿ ಅಳವಡಿಸಿರುವ ಬ್ಯಾನರ್ ಗಳು ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಕಂಡುಬಂತು.

Advertisement

ಶನಿವಾರ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಾಣಾಪೂರ ಗಂಗಾವತಿ ವರೆಗೆ ಬಿ.ವೈ ವಿಜಯೇಂದ್ರ ಅವರ ವಿವಿಧ ಫೋಟೋ ಇರುವ ಬ್ಯಾನರ್ ಬಂಟಿಂಗ್ಸ್ ಹಾಕಿ ಸ್ವಾಗತ ಕೋರಿದರು.

ಇದನ್ನೂ ಓದಿ:ಪಶ್ಚಿಮಬಂಗಾಳ: 100 ಗ್ರಾಂ ಕೊಕೇನ್ ಸಹಿತ ಬಿಜೆಪಿ ಯುವಮೋರ್ಚಾ ನಾಯಕಿ ಬಂಧನ

ಬ್ಯಾನರ್ ನಲ್ಲಿ ಬಾಹುಬಲಿ ವೇಷಭೂಷಣ ದಲ್ಲಿ ವಿಜಯೇಂದ್ರ ಅವರ ಪೋಟೋ ಕಾಣಿಸಿದ್ದು ವಿಶೇಷವಾಗಿತ್ತು. ಅಂಜನಾದ್ರಿ ಬೆಟ್ಟಕ್ಕೆ ಬರುವ ವಾಹನಗಳು ನಿಲ್ಲುವ ಪಾರ್ಕಿಂಗ್ ಜಾಗದಲ್ಲಿ ವೇದಿಕೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ಯಾನರ್ ಕಾಣುತ್ತಿದ್ದು ಕೇಸರಿ ಧ್ವಜ ಬಿಜೆಪಿ ಪಕ್ಷದ ಧ್ವಜಗಳು ರಾರಾಜಿಸುತ್ತಿವೆ.

ಬಿಜೆಪಿ ಯುವ ಮೋರ್ಚಾ ನೂರಾರು ಕಾರ್ಯಕರ್ತರು ವಿಜಯೇಂದ್ರ ಪರವಾಗಿ ಘೋಷಣೆ ಮತ್ತು ಮೆರವಣಿಗೆ ಮೂಲಕ ಸ್ವಾಗತ ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next