Advertisement

Shimoga; ಕಾಂಗ್ರೆಸ್ ನವರ ಪಾಪದ ಕೊಡ ತುಂಬುತ್ತಿದೆ: ಬಿ.ವೈ.ರಾಘವೇಂದ್ರ

02:59 PM Feb 09, 2024 | keerthan |

ಶಿವಮೊಗ್ಗ: ಹನುಮ ಧ್ವಜ ಹಾಕುವ ವಿಚಾರದಲ್ಲಿ ಚರ್ಚೆಗಳು, ಎಳೆದಾಟಗಳು ನಡೆಯುತ್ತಿವೆ. ಬಂದ್ ಪರಿಸ್ಥಿತಿಗೆ ಹೋಗಬಾರದು. ಸರ್ಕಾರದಿಂದ ಹಿಂದೂಗಳ ಮನಸ್ಥಿತಿ ತುಳಿಯುವ ಕೆಲಸವಾಗುತ್ತಿದೆ. ತುಷ್ಟಿಕರಣ ರಾಜಕೀಯದಿಂದ ಅಲ್ಪಸಂಖ್ಯಾತರ‌ ಮತ ಪಡೆಯಬಹುದೆಂದು ಕಾಂಗ್ರೆಸ್ ನವರು ಎಂದುಕೊಂಡಿದ್ದಾರೆ. ಕಾಂಗ್ರೆಸ್ ನವರು ತಮ್ಮ ತಪ್ಪನ್ನ ತಿದ್ದುಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ವಿರುದ್ಧ ನಡೆದುಕೊಳ್ಳುವುದನ್ನು ಕಾಂಗ್ರೆಸ್ ನವರು ಬಿಡಬೇಕು. ಹೀಗೆ ಮಾಡಿ ಪಾರ್ಲಿಮೆಂಟ್ ನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಕೂಡ ಇಲ್ಲವಾಗುತ್ತದೆ. ಹಿಂದೂಗಳ ಮನಸ್ಥಿತಿಗೆ ವಿರೋಧವಾಗಿ ನಡೆದುಕೊಳ್ಳುವ ಪ್ರಯತ್ನ ನಡೆಯಿತು. ಹಿಂದುತ್ವವನ್ನು ತುಳಿಯುವ ಕೆಲಸ ಆಗಬಾರದು, ಹಿಂದುತ್ವದ ಪರವಾದ ಶಕ್ತಿ ಖಂಡಿತ ಬುದ್ದಿ ಕಲಿಸುತ್ತದೆ. ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದರು.

ಡಿ.ಕೆ.ಸುರೇಶ್ ಹೇಳಿಕೆಯಿಂದ ಆಶ್ಚರ್ಯವಾಗಿದೆ. ನಾಚಿಕೆಯಾಗಬೇಕು, ಇದೇ ರೀತಿ ಹೇಳಿ ತುರ್ತು ಪರಿಸ್ಥಿತಿ ತಂದು ಅದರ ಶಾಪದಿಂದ ಇವತ್ತು ವಿರೋಧ ಪಕ್ಷದಲ್ಲಿ ಕೂರದಷ್ಟು ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿ ಹೇಳಿಕೆ ನೀಡಿದಾಗ ಅವರ ಪಕ್ಷದ ನಾಯಕರು ಕಿವಿ ಹಿಂಡಬೇಕು ಕಾಂಗ್ರೆಸ್ ನವರ ಪಾಪದ ಕೊಡ ತುಂಬುತ್ತಿದೆ. ಅವರ ತಪ್ಪಿನ ಅರಿವನ್ನು ಮಾಡಿಕೊಳ್ಳದೆ ಹೊದರೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ಸಿಗುತ್ತದೆ ಎಂದು ರಾಘವೇಂದ್ರ ಹೇಳಿದರು.

ಹಿಂದೂಗಳ ತೆರಿಗೆ ಹಿಂದೂಗಳಿಗೆ ನೀಡಬೇಕು ಎನ್ನುವ ಹರೀಶ್ ಪುಂಜಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರಪಂಚದಲ್ಲಿ ಇರುವ ಹಿಂದೂ ರಾಷ್ಟ್ರ‌ ಇದೊಂದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಪದೇ ಪದೇ ತರುತ್ತಿದ್ದಾರೆ. ಅವರು ನೋವಿನ ಭಾವನೆಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ ಎಂದ ರಾಘವೇಂದ್ರ,  ಕಪ್ಪು ಪತ್ರ ತೋರಿಸುವುದು ರಾಜಕೀಯ ಗಿಮಿಕ್ ಅಷ್ಟೇ. ಅದಕ್ಕೆ ಬೆಲೆಯಾಗಲಿ ತೂಕ ಆಗಲಿ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next