Advertisement

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

11:01 AM Sep 17, 2024 | Team Udayavani |

ಕುಂದಾಪುರ: ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಸೋಮವಾರ ಭೇಟಿ ನೀಡಿದರು. ಚಿತ್ರಕೂಟದ ಚಿಕಿತ್ಸಾ ಪದ್ಧತಿಯನ್ನು ವೀಕ್ಷಿಸಿದ ಸಂಸದರು, ಆಯುರ್ವೇದ ಚಿಕಿತ್ಸೆ ನೀಡುವುದು ಪವಿತ್ರ ಕಾರ್ಯ. ಅಲೋಪತಿಗಿಂತ ಆಯುರ್ವೇದವೇ ಶ್ರೇಷ್ಠ ಅನ್ನುವುದು ಈಗಾಗಲೇ ಸಾಬೀತಾಗಿದೆ.

Advertisement

ಕೊರೊನಾ ಸಂದರ್ಭದಲ್ಲಿಯೂ ಆಯುರ್ವೇದ ಚಿಕಿತ್ಸೆಗೆ ಜನ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. 15 ವರ್ಷಗಳಿಂದ ಆಲೂರಿನಲ್ಲಿ ಸುದೀರ್ಘ‌ ಸೇವೆ ಮಾಡುತ್ತಿದ್ದು, ಲಾಭಕ್ಕಿಂತ ಹೆಚ್ಚು ಸೇವಾ ಮನೋಭಾವದಿಂದ ಅನೇಕ ಜನರಿಗೆ ಪ್ರಯೋಜನ ಆಗುತ್ತಿರುವುದು ಶ್ಲಾಘನೀಯ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಚಿತ್ರಕೂಟ ಚಿಕಿತ್ಸಾಲಯದ ವತಿಯಿಂದ ಸಂಸದರನ್ನು ಗೌರವಿಸಲಾಯಿತು.

ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ| ರಾಜೇಶ್‌ ಬಾಯರಿ ಹಾಗೂ ಡಾ| ಅನುಲೇಖ ಬಾಯರಿ ದಂಪತಿಯನ್ನು ಬಿ.ವೈ. ರಾಘವೇಂದ್ರ ಸಮ್ಮಾನಿಸಿದರು. ಮಹಾಬಲ ಬಾಯರಿ, ಮಕ್ಕಳು, ಚಿತ್ರಕೂಟ ಸಂಸ್ಥೆಯ ವೈದ್ಯರು, ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.