ಬೆಂಗಳೂರು: ಪ್ರಸಕ್ತ ಸಾಲಿನ ಬಿಇ ಆರ್ಕಿಟೆಕ್ಚರ್ ಪ್ರವೇಶಾತಿಗೆ ನ.30ರಂದು ಪ್ರಕಟಿಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ ರ್ಯಾಂಕ್ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಡೆಹಿಡಿದಿದೆ.
ವಿದ್ಯಾರ್ಥಿಯು 12ನೇ ತರಗತಿಯಲ್ಲಿ ಗಳಿಸಿರುವ ಒಟ್ಟು ಅಂಕದ ಶೇ 50ರಷ್ಟು ಮತ್ತು ಜೆಇಇ/ನಾಟಾ (ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಅಂಕದಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಗಳಿಸಿದ್ದಾರೊ ಅದರ ಶೇ 50ರಷ್ಟು ಸೇರಿಸಿ ಕೆಇಎ ರ್ಯಾಂಕ್ ಪಟ್ಟಿ ಪ್ರಕಟಿಸಿತ್ತು.
ಆದರೆ, ಪ್ರಸಕ್ತ ಸಾಲಿನ ಜೆಇಇ ಪರೀಕ್ಷೆ ಫಲಿತಾಂಶದ ಎನ್‌ಟಿಎ ಅಂಕವನ್ನು ಶೇಕಡಾವಾರು ಮಾದರಿಯಲ್ಲಿ ನೀಡಿದೆ. ಅದರ ಅಧಾರದಲ್ಲಿ ರ್ಯಾಂಕ್ ಪಟ್ಟಿಯನ್ನು ಕೆಇಎ ಪ್ರಕಟಿಸಿದೆ. ಆದರೆ ಈ ಸಂದರ್ಭದಲ್ಲಿ ಹಲವಾರು ವ್ಯತ್ಯಾಸಗಳು ಕಂಡುಬಂದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ದೂರು ನೀಡಿದ್ದರು.
ಇದನ್ನೂ ಓದಿ:ರಾಜ್ಯಸಭೆಯಲ್ಲಿ “ಕೈ” ತಪ್ಪಿಹೋದ ಬಹುಮತದ ಅಸ್ತ್ರ! ಈಗ ಬಿಜೆಪಿ ಮತ್ತಷ್ಟು ಬಲಿಷ್ಠ
ಈ ಹಿನ್ನಲೆಯಲ್ಲಿ ಪಟ್ಟಿಯನ್ನು ತಡೆ ಹಿಡಿಯಲಾಗಿದೆ. ಸಂಬಂಧಪಟ್ಟ ಸಂಸ್ಥೆಗಳಿಂದ ಸ್ಪಷ್ಟೀಕರಣ ಪಡೆದ ಬಳಿಕ ರ್ಯಾಂಕ್ ಪಟ್ಟಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆಇಎ ತಿಳಿಸಿದೆ.