Advertisement

ಹಳಿಯಾಳ ಪುರಸಭೆ: ಅಜಾತಶತ್ರು ಅಧ್ಯಕ್ಷ ಅಜರುದ್ದೀನ್‌ ಬಸರೀಕಟ್ಟಿ

11:08 AM Jul 02, 2022 | Team Udayavani |

ಮೂಲತಃ ಉದ್ಯಮಿಯಾಗಿರುವ ಪುರಸಭೆ ಅಧ್ಯಕ್ಷ ಅಜರುದ್ದೀನ್‌ ಬಸರೀಕಟ್ಟಿ ಅವರು ರಾಜಕೀಯಕ್ಕೆ ಹೊಸಬರಾದರೂ ಮೊದಲ ಬಾರಿ ಪುರಸಭೆಯ ಸದಸ್ಯತ್ವವನ್ನು ಪಡೆದು ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದವರು. ರಾಜಕೀಯ ಇವರಿಗೆ ಹೊಸದಿರಬಹುದು ಆದರೆ ಇವರ ನಡವಳಿಕೆ, ಸೌಜನ್ಯತೆ, ರಾಜಕೀಯ ಅನುಭವ ಹಿರಿಯರನ್ನು ಸಹ ಮೀರಿಸುವಂತಿದೆ. ತಮ್ಮ ಬಳಿ ಸಮಸ್ಯೆ ಹೇಳಿಕೊಂಡು ಬರುವ ಸಾರ್ವಜನಿಕರ ಕುಂದುಕೊರತೆಗಳನ್ನು ಸಮಾಧಾನದಿಂದ ಆಲಿಸುವ ಬಸರಿಕಟ್ಟಿ ಅವರು ಸೂಕ್ತ, ಪರ್ಯಾಯ ಹಾಗೂ ಶಾಶ್ವತ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಯತ್ನಿಸುತ್ತಾರೆ.

Advertisement

ಉತ್ತಮ ಕೇಳುಗರಾಗಿರುವ ಅಜರುದ್ದೀನ್‌ ಅವರು ಯಾವುದೇ ಜಾತಿ, ಧರ್ಮ, ಪಕ್ಷವನ್ನು ಪರಿಗಣನೆಗೆ ತೆಗೆದುಕೊಳ್ಳದೆ ತಮ್ಮ ಬಳಿ ಬರುವ ಸಾರ್ವಜನಿಕರಿಗೆ ಸದಾ ಸಹಾಯ ಹಸ್ತ ಕಲ್ಪಿಸುತ್ತಾರೆ. ಇದರಿಂದಾಗಿ ಹಳಿಯಾಳದಲ್ಲಿ ಬಸರಿಕಟ್ಟಿ ಅವರು ಮನೆಮಾತಾಗಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ (ಕೆಲ ಸಂದರ್ಭಗಳನ್ನು ಹೊರತುಪಡಿಸಿ) ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲೆಂದೇ ಪುರಸಭೆಗೆ ಆಗಮಿಸುವ ಇವರು ನಡೆದುಕೊಳ್ಳುವ ರೀತಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ಸಾಕಷ್ಟು ಸಿರಿ ಸಂಪತ್ತು ಹೊಂದಿರುವ ಶ್ರೀಮಂತ ಕುಟುಂಬದ ಕುಡಿಯಾಗಿರುವ ಅಜರುದ್ದೀನ್‌ ಅವರು ಬಡವ-ಶ್ರೀಮಂತರೆಂಬ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನತೆಯಿಂದ ಕಾಣುವ ಗುಣ ಮೈಗೂಡಿಸಿಕೊಂಡಿದ್ದಾರೆ. ಇವರ ಆಡಳಿತಾವಧಿಯಲ್ಲಿ ಪುರಸಭೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಬಹುದಾಗಿದೆ.

ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಡನೆ ಉತ್ತಮ ಬಾಂಧವ್ಯ ಹೊಂದಿರುವ ಅಧ್ಯಕ್ಷ ಅಜರುದ್ದೀನ್‌ ಅವರು ಸಕಾಲಕ್ಕೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸುತ್ತಾರೆ. ಒಂದು ವೇಳೆ ಅ ಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಸಾಧ್ಯವಾಗದಂತೆ ಕೆಲಸಗಳನ್ನು ಶಾಸಕ ಆರ್‌.ವಿ.ದೇಶಪಾಂಡೆ ಅವರ ಗಮನಕ್ಕೆ ತಂದು ಪರಿಹರಿಸಿಕೊಟ್ಟಂತಹ ಸಾಕಷ್ಟು ಉದಾಹರಣೆಗಳಿವೆ. ಸರ್ವರ ಸಹಕಾರ ನಿರೀಕ್ಷಿಸುವ ಬಸರಿಕಟ್ಟಿ ಅವರಿಗೆ ವಿರೋಧ ಪಕ್ಷದಲ್ಲೂ ಉತ್ತಮ ಸ್ನೇಹಿತರಿದ್ದು, ಅವರ ಸಲಹೆ- ಸೂಚನೆಗಳನ್ನು ಪಡೆದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಿಯಾಶೀಲರಾಗಿ ಪ್ರಯತ್ನಿಸುತ್ತಿರುವುದು ಇವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ ಯಾಗಿದೆ.

ಉತ್ಸಾಹಿ, ಯುವ ನಾಯಕರಾಗಿರುವ ಬಸರಿಕಟ್ಟಿ ಅವರು ಮುಂಬರುವ ದಿನಗಳಲ್ಲಿ ದೊಡ್ಡಮಟ್ಟದ ನಾಯಕರಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕರು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

ಕೊಳಗೇರಿ ನಿವಾಸಿಗಳ ಪಾಲಿನ
ಆಪದ್ಬಾಂಧವ ಅಜರುದ್ದೀನ್‌
ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಬಹುತೇಕ ಜನರು ಬಡವರಾಗಿರುತ್ತಾರೆ ಅವರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುವ ಬಸರಿಕಟ್ಟಿ ಅವರು ಇತ್ತೀಚೆಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳ ವಂತಿಗೆಯನ್ನು ಪಾವತಿಸಲಾಗದ ಸಾಕಷ್ಟು ಫಲಾನುಭವಿಗಳಿಗೆ ಧನಸಹಾಯ ನೀಡಿ ಸ್ವಂತ ಸೂರು ಪಡೆಯಬೇಕೆಂಬುವವರ ಕನಸಿಗೆ ಕನ್ನಡಿಯಾಗಿದ್ದಾರೆ. ದೀನ-ದಲಿತರ, ಬಡಬಗ್ಗರ ಆಶಾಕಿರಣವಾಗಿರುವ ಅಜರುದ್ದೀನ್‌ ಇನ್ನೂ ಎತ್ತರಕ್ಕೆ ಬೆಳೆದು ಅಧಿಕ ಆಯುರಾರೋಗ್ಯ ಮತ್ತು ಅಧಿಕಾರ ಗದ್ದುಗೆ ಏರಬೇಕೆಂಬುದು ಅವರಿಂದ ಸಹಾಯ-ಸಹಕಾರ ಪಡೆದ ಸಾರ್ವಜನಿಕರ ಆಶಯವಾಗಿದೆ.

Advertisement

ಶಾಸಕ ಆರ್‌.ವಿ. ದೇಶಪಾಂಡೆ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ನಾವು ಮುಂದೆ ಸಾಗುತ್ತಿದ್ದೇವೆ. ಇಳಿವಯಸ್ಸಿನಲ್ಲೂ ಅವರು ದಣಿವರಿಯದೆ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಪಟ್ಟಣದ ಕುರಿತು ಅಪಾರ ಕಾಳಜಿ ಹೊಂದಿರುವ ದೇಶಪಾಂಡೆ ಅವರಂತಹ ನಾಯಕರು ವಿರಳ. ಅವರ ಆಡಳಿತಾವಧಿಯಲ್ಲಿ ಪಟ್ಟಣ ಸರ್ವಾಂಗೀಣ ರೀತಿಯಲ್ಲಿಯೂ ಅಭಿವೃದ್ಧಿ ಕಾಣುತ್ತಿದೆ. ಪುರಸಭೆಯ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ನಮಗೆ ಸಹಕಾರ ನೀಡುತ್ತಿರುವುದು ನಮ್ಮ ಭಾಗ್ಯ.
-ಅಜರುದ್ದೀನ್‌ ಬಸರೀಕಟ್ಟಿ,
ಅಧ್ಯಕ್ಷರು, ಪುರಸಭೆ ಹಳಿಯಾಳ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next