Advertisement

ಹುಮನಾವಾದ: ಸ್ವಾತಂತ್ರ್ಯ ಅಮೃತಮಹೋತ್ಸವ; ಪಟ್ಟಣದಲ್ಲಿ ಪ್ರತಿದಿನ ಹತ್ತಾರು ಜಾಥ

04:27 PM Aug 14, 2022 | Team Udayavani |

ಹುಮನಾವಾದ: ಕಳೆದ ಆ.8 ರಂದು ಆರಭಗೊಂಡ ತಿರಂಗಾ ಜಾಥಗಳು ಪ್ರತಿದಿನ ಹತ್ತಾರು ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳ ನೇತೃತ್ವದಲ್ಲಿ, ಕಾಲ್ನಡಿಗೆ ಜಾಥಾ, ಬೈಕ್ ಜಾಥಾಗಳು ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.

Advertisement

ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗಾ ಯೋಜನೆಗೆ  ಪಟ್ಟಣದಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಪ್ರತಿಯೊಂದು ಮನೆ ಅಂಗಡಿಗಳ ಮೇಲೆ ರಾಷ್ಟ್ರಧ್ವಜ ಹಾರುತಿರುವುದು ಕಂಡುಬರುತ್ತಿದೆ.

ದ್ವಿ ಚಕ್ರ ವಾಹನ, ಆಟೋ, ಕಾರುಗಳ ಮೇಲೆ ಕೂಡ ರಾಷ್ಟ್ರಧ್ವಜ ಹಚ್ಚಿ ಜನರು ಸಂಭ್ರಮಿಸುತ್ತಿದ್ದಾರೆ. ಒಟ್ಟಾರೆ ಈ ವರ್ಷದ ಅಮೃತಮಹೋತ್ಸವನ್ನು ಇಲ್ಲಿನ ಜನರು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಪಟ್ಟಣದ ಎಲ್ಲಾ ಕಡೆಗಳಲ್ಲಿ ರಾಷ್ಟ್ರಭಕ್ತಿಯ ಕಲರವ ಕಂಡುಬರುತ್ತಿದೆ.

ಬಿಜೆಪಿ ಬೈಕ್ ರ್ಯಾಲಿ: ಭಾನುವಾರ ಬೆಳಿಗ್ಗೆ ಬಿಜೆಪಿ ಪಕ್ಷದ ವತಿಯಿಂದ ಪಟ್ಟಣದಲ್ಲಿ ಅದ್ದೂರಿ ಬೈಕ್ ರ್ಯಾಲಿ ನಡೆಯಿತು. ನೂರಾರು ಬೈಕ್ ಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭಾರತ್ ಮಾತಾ ಕೀ ಜಯ್ ಎಂಬ ಜಯಘೋಷ ಹಾಕಿದರು. ಬಿಜೆಪಿ ಯುವ ಮುಖಂಡ ಡಾ। ಸಿದ್ದಲಿಂಗಪ್ಪ ಪಾಟೀಲ, ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ಸೋಮನಾಥ ಪಾಟೀಲ, ರಮೇಶ ಕಲ್ಲೂರ್, ಮಧುಕರ್ ಹಿಲಾಲಪೂರ್, ಸುನೀಲ ಪಾಟೀಲ, ನಾಗೇಶ ಕಲ್ಲೂರ್, ಗಿರೀಶ ತುಂಬಾ, ದಯಾನಂದ ಮೇತ್ರೆ, ಪ್ರಭಾಕಾರ ನಾಗರಾಳೆ, ಗಿರೀಶ ಮಾಲಿಪಾಟೀಲ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next