Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

12:06 AM Aug 08, 2022 | Team Udayavani |

ಸರ್ದಾರ್‌ ಸಿಂಗ್‌ಜಿ ರಾವ್‌ಜಿ ರಾಣ (1870-1957)
ಶಾಲೆಯಲ್ಲಿ ಮೋಹನ್‌ದಾಸ್‌ ಗಾಂಧಿಯ­ವರ ಸಹಪಾಠಿಯಾಗಿದ್ದ ಸರ್ದಾರ್‌ ಸಿಂಗ್‌ಜಿ ರಾವ್‌ಜಿ ರಾಣ ಅವರು ತಮ್ಮ ಬ್ಯಾರಿಸ್ಟರ್‌ ಓದಿನ ಬಳಿಕ ಪ್ಯಾರಿಸ್‌ಗೆ ತೆರಳಿದರು. ಅಲ್ಲಿನ ಕ್ಯಾಂಬೆ ಆಭರಣ ವ್ಯಾಪಾರಿಗಳಿಗೆ ಸಹಾಯಕರಾಗಿದ್ದರು. ಅನೇಕ ಭಾರತೀಯ ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾ­ದರು. 1905ರಲ್ಲಿ ಇಂಡಿಯನ್‌ ಹೋಮ್‌ರೂಲ್‌ ಸೊಸೈಟಿ ಸಂಸ್ಥಾಪನ ಸದಸ್ಯ­ರಾದರು. ಸಾವರ್ಕರ್‌ ಅವರ ನಿಷೇಧಿತ ಪುಸ್ತಕಗಳ ಮುದ್ರಣ, ಲಾಲಾ ಲಜಪತ್‌ರಾಯ್‌ ಅವರು ತಂಗಲು ಅವಕಾಶ ಸೇರಿದಂತೆ ಭಾರತೀಯ ರಾಷ್ಟ್ರೀಯ ಚಳವಳಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದರು.

Advertisement

ನರಸಿಂಹ ಚಿಂತಮನ್‌ ಕೇಳ್ಕರ್‌ (1872-1962)
ಬಾಲಗಂಗಾಧರ ತಿಲಕರ ನಿಕಟವರ್ತಿ­ಯಾಗಿದ್ದ ನರಸಿಂಹ ಚಿಂತಮನ್‌ ಕೇಳ್ಕರ್‌ ಮರಾಠಿ ಬರಹಗಾರರಾಗಿ, ವಕೀಲರಾಗಿ, ರಾಷ್ಟ್ರೀಯವಾದಿ ನಾಯಕ­ನಾಗಿ ಕಾಣ ಸಿಗುತ್ತಾರೆ. ಗಾಂಧೀಜಿ ಅವರ ಅಸಹಕಾರ ಚಳವಳಿ ಬಳಿಕ ಸ್ವರಾಜ್‌ ಪಕ್ಷವನ್ನು ಸೇರಿದರು. ತಿಲಕರ ನಿಧನಾನಂತರ ಕೇಸರಿ ಪತ್ರಿಕೆಯ ಸಂಪಾದಕರಾಗಿ, ಟ್ರಸ್ಟಿಯಾಗಿ ಹಲವು ವರ್ಷ ನಡೆಸಿದರು. ಸಾಹಿತಿ ಸಾಮ್ರಾಟ್‌ ತಾತ್ಯಾಸಾಹೇಬ್‌ ಕೇಳ್ಕರ್‌ ಎಂದೇ ಪ್ರಸಿದ್ದ‌ರು.

ಪುರುಷೋತ್ತಮ್‌ ದಾಸ್‌ ತಂಡನ್‌(1882-1962)
ವಂಗಭಂಗ ಚಳವಳಿಯಿಂದ ಪ್ರಭಾವಿತ­ರಾದ ಪುರುಷೋತ್ತಮ್‌ ದಾಸ್‌ ತಂಡನ್‌ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದರು. ಕಾಂಗ್ರೆಸ್‌ಗೆ ಹತ್ತಿರವಾಗಿ ಗೋಪಾಲ­ಕೃಷ್ಣಗೋಖಲೆ ಅವರ ಅಂಗ ರಕ್ಷಕರಂತೆ ಅಧಿವೇಶನದಲ್ಲಿ ಭಾಗವಹಿಸಿ ದರು. ವಕೀಲರಾಗಿದ್ದ ಅವರು 1931ರ ದುಂಡು ಮೇಜಿನ ಸಮ್ಮೇಳನದ ಅನಂತರ ಭಾರತದಲ್ಲಿ ಬಂಧಿತರಾದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ತಂಡನ್‌ ಕೂಡ ಇದ್ದರು.

ವಿನಾಯಕ ದಾಮೋದರ ಸಾವರ್ಕರ್‌(1883-1966)
ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್‌ ಚೇತನ ವಿನಾಯಕ ದಾಮೋ ದರ ಸಾವರ್ಕರ್‌. ದೇಶದ ವಿವಿಧ ವಿಷಯಗಳ ಬಗ್ಗೆ ಚಿಂತಿಸಿದ ವಾಗ್ಮಿ, ಲೇಖಕ, ಇತಿಹಾಸಕಾರ, ಕವಿ, ತತ್ವಶಾ ಸ್ತ್ರಜ್ಞ. ಕ್ರಾಂತಿಕಾರಿ­ಯಾಗಿ ಅವರು ಬರೆದ ಪುಸ್ತಕಗಳನ್ನು ಬ್ರಿಟಿಷ್‌ ಸರಕಾರ ನಿಷೇಧಿಸಿತ್ತು. ಭಾರತೀಯರಲ್ಲಿ ಹಿಂದುತ್ವವನ್ನು ಜಾಗೃತಗೊಳಿಸಿದ ಕಾರಣ ಅವರನ್ನು ಕೋಮುವಾದಿ ಎಂದು ಬಣ್ಣಿಸಲಾಗಿತ್ತು.

ಜಿತೇಂದ್ರನಾಥ ಮುಖರ್ಜಿ (1879-1915)
ಬ್ರಿಟಿಷರ ವಿರುದ್ಧ ಸಿಡಿದೆದ್ದ ಯುವಕ ಜಿತೇಂದ್ರನಾಥ್‌ ಮುಖರ್ಜಿ. ಇವರನ್ನು ಬಾಗಾ ಜತಿನ್‌ ಎಂದು ಕರೆಯುತ್ತಿದ್ದರು. 1900ರಲ್ಲಿ ಅನುಶೀಲನ ಸಮಿತಿಯ ರಚನೆಗೆ ಕಾರಣರಾದ ಅವರು, ಹಲವು ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆದು ರಹಸ್ಯ ಸಭೆಗಳ ಮೂಲಕ ರಾಷ್ಟ್ರೀಯ ಚಿಂತನೆಗಳನ್ನು ಬಿತ್ತಿದರು. ಕ್ರಾಂತಿಕಾರಿಗಳನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಬಂದೂಕು, ಬಾಂಬ್‌ಗಳನ್ನು ಬಳಸಿ ಸ್ಫೋಟಗಳನ್ನು ನಡೆಸುತ್ತಿದ್ದರು. ಅಲಿಪೋರ್‌ ಬಾಂಬ್‌ ಪ್ರಕರಣದಲ್ಲಿ ಇವರೂ ಆರೋಪಿ.

Advertisement

ಅರವಿಂದ ಘೋಷ್‌ (1872-1950)
ಸ್ವಾತಂತ್ರ್ಯ­ಕ್ಕಾಗಿ ಹೋರಾಡಿ ನಂತರದಲ್ಲಿ ಅಧ್ಯಾತ್ಮದೆಡೆಗೆ ಪರಿವರ್ತನೆಗೊಂಡ ಚೇತನ ಅರವಿಂದ ಘೋಷರು. ಇಂಡಿಯನ್‌ ಸಿವಿಲ್‌ ಸರ್ವಿಸ್‌ನಲ್ಲಿ ಅನುತ್ತೀರ್ಣರಾದ ಅರವಿಂದರೂ ಆಂಗ್ಲ ಪ್ರಾಧ್ಯಾಪಕರಾದರು. ಆ ವೇಳೆಗೆ ಬ್ರಿಟಿಷರು ದೇಶಕ್ಕೆ ಮಾಡುತ್ತಿದ್ದ ಅನ್ಯಾಯವನ್ನು ಅರಿತರು. ವಂದೇ ಮಾತರಂ ಪತ್ರಿಕೆ ಹೊರತಂದು ಬ್ರಿಟಿಷರ ವಿರುದ್ಧ ಕ್ರಾಂತಿ ಕಾರಿ ಚಿಂತನೆಗಳನ್ನು ಜಾಗೃತಗೊಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next