Advertisement

ಕುಂದಾಪುರದಲ್ಲಿ ಅಝಾದಿ ಸಮಾವೇಶ: “ದೇಶ ಉಳಿಸಿ-ದ್ವೇಷ ಅಳಿಸಿ’

07:30 AM Aug 13, 2017 | Team Udayavani |

ಕುಂದಾಪುರ:  ಈ ದೇಶದ ಶ್ರೇಷ್ಠತೆ, ಸಂಪತ್ತು, ಇತಿಹಾಸವನ್ನು ಕಂಡು ದೇಶದ ಮೇಲೆ ಅನೇಕ ದಾಳಿಗಳು ನಡೆದರೂ ಸು ಧೀರ್ಘ‌ವಾದ ಹೋರಾಟಗಳ ಮೂಲಕ ಬ್ರಿಟಿಷರಿಂದ ಮುಕ್ತಿ ಪಡೆದಿದೆ. ನಾವು ದೇಶಕ್ಕೆ ಸ್ವಾತಂತ್ರ್ಯ ತರುವ ನಿಟ್ಟಿನಲ್ಲಿ ಸ್ವಾತಂತ್ರ್ಯಸೇನಾನಿಗಳ ಕನಸನ್ನು ನನಸು ಮಾಡಬೇಕಾಗಿದೆ. ದ್ವೇಷ, ಅಸೂಯೆಗಳು ಈ ದೇಶವನ್ನು ಬಿಟ್ಟು ತೊಲಗಬೇಕಾಗಿದೆ ಎಂದು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹಾಫಿಳ್‌ ಮುಹಮ್ಮದ್‌ ಸುಫ್ಯಾನ್‌ ಸಖಾಫಿ ಹೇಳಿದರು.

Advertisement

ಅವರು ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನಡೆದ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್‌ ಫೆಡರೇಶನ್‌ ರಿ., ಎಸ್‌.ಎಸ್‌.ಎಫ್‌ ಉಡುಪಿ ಜಿಲ್ಲೆಯ ವತಿಯಿಂದ  ನಡೆದ ದೇಶ ಉಳಿಸಿ-ದ್ವೇಷ ಅಳಿಸಿ ಅಝಾದಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಸಂದೇಶ ಭಾಷಣ ಮಾಡಿದರು.

ಎಸ್‌.ಎಸ್‌.ಎಫ್‌. ಉತ್ತರ ಕನ್ನಡ ಜಿಲ್ಲೆ ಅಧ್ಯಕ್ಷ ಅಸ್ಸಯ್ಯದ್‌ ಅಲವಿ ತಂಙಳ್‌ ಅಲ್‌ ಬುಖಾರಿ,  ಎಸ್‌.ಎಸ್‌.ಎಫ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಇಲ್ಯಾಸ್‌ ನಾವುಂದ,  ಎಸ್‌.ಎಸ್‌.ಎಫ್‌ ಇಹ್ಸಾನ್‌ ಕರ್ನಾಟಕ ಇದರ ಜನರಲ್‌ ಕನ್ವೀನರ್‌ ಕೆ.ಎ. ಅಬ್ದುರ್ರಹ್ಮಾನ್‌ ರಝಿÌ,  ಎಸ್‌.ಎಸ್‌.ಎಫ್‌  ಉಡುಪಿ ಜಿಲ್ಲೆ  ಉಸ್ತುವಾರಿ ಶಾಹುಲ್‌ ಹಮೀದ್‌ ಮುಸ್ಲಿಯಾರ್‌ ಶಿವಮೊಗ್ಗ, ಎಸ್‌.ಎಸ್‌.ಎಫ್‌ ರಾಜ್ಯ ಸಮಿತಿ ಸದಸ್ಯ ಅಬ್ದುರ್ರವೂಫ್‌ ಖಾನ್‌, ಎಸ್‌.ಎಸ್‌.ಎಫ್‌  ಕುಂದಾಪುರ ವಿಭಾಗದ ಅಧ್ಯಕ್ಷ ಮುಹಮ್ಮದ್‌ ಮುಸ್ತಪ ಸಅದಿ, ಉಡುಪಿ ವಿಭಾಗದ ಅಧ್ಯಕ್ಷ ಕೆ.ಎಂ.ಅಬ್ದುರ್ರಹ್ಮಾನ್‌ ಸಅದಿ, ಎಸ್‌.ವೈ.ಎಸ್‌  ಉಡುಪಿ ಜಿಲ್ಲೆ ಅಧ್ಯಕ್ಷ ಅಸ್ಸಯ್ಯಿದ್‌ ಜಲ್‌ಫರ್‌ ಅಸ್ಸಖಾಫ್‌ ತಂಙಳ್‌ ಕೋಟೇಶ್ವರ ಉಪಸ್ಥಿತರಿದ್ದರು.ಎಸ್‌.ಎಸ್‌.ಎಫ್‌.  ಉಡುಪಿ ಜಿಲ್ಲೆ ಅಧ್ಯಕ್ಷ ಪಿ.ಎಂ.ಎ. ಮುಹಮ್ಮದ್‌ ಅಶ್ರಫ್‌ ರಝಾ ಅಂಜದಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದಲ್ಲಿ ಜಾಥಾ ನಡೆಯಿತು.

ಈ ದೇಶದಲ್ಲಿ ಶೇ. 99ರಷ್ಟು  ಜನತೆ ಶಾಂತಿ ಬಯಸುತ್ತಾರೆ ಆದರೆ ಶೇ.1ರಷ್ಟು ಮಂದಿ ಮಾತ್ರ ಸ್ವಾರ್ಥ ಹಿತಾಸಕ್ತಿಗಾಗಿ ಧರ್ಮ, ರಾಜಕೀಯದ ಹೆಸರಲ್ಲಿ ಅಶಾಂತಿ ಸೃಷ್ಟಿಸುತ್ತಾರೆ. ಈ ಬಗ್ಗೆ  ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ.
– ಹಾಫಿಳ್‌ ಮುಹಮ್ಮದ್‌ ಸುಫ್ಯಾನ್‌ 

Advertisement

Udayavani is now on Telegram. Click here to join our channel and stay updated with the latest news.

Next