Advertisement

ಡಿಎನ್‌ಎ “ಮೋದಿ-ಫೈಡ್”: ಜೈರಾಮ್‌ ರಮೇಶ್‌ ಗೆ ಅಜಾದ್ ತಿರುಗೇಟು

06:58 PM Aug 29, 2022 | Team Udayavani |

ನವದೆಹಲಿ:ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಸಂಸದ ಜೈರಾಮ್‌ ರಮೇಶ್‌ ಗೇಲಿ ಮಾಡಿದ್ದಕ್ಕೆ ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್‌ ಪ್ರತಿಕ್ರಿಯಿಸಿದ್ದು, ನನ್ನ ಡಿಎನ್‌ಎ ಬಗ್ಗೆ ಮಾತನಾಡುವ ವ್ಯಕ್ತಿ, ಅವರ ಡಿಎನ್‌ಎ ಯಾವುದು? ಅವರು ಇಲ್ಲಿರುವುದು ನನ್ನ ವಿರುದ್ಧ ಕಥೆಗಳನ್ನು ಹುಟ್ಟುಹಾಕಲು ಮಾತ್ರವೇ? ರಾಜ್ಯಸಭೆಯಲ್ಲಿ ಕುಳಿತು ಬಿಜೆಪಿಗೆ ಸ್ಲಿಪ್ ಕಳುಹಿಸುತ್ತಿದ್ದವರು ನನ್ನ ಡಿಎನ್‌ಎ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

Advertisement

ರಮೇಶ್ ಅವರು ಆಜಾದ್ ಅವರ ಡಿಎನ್‌ಎ ಬಗ್ಗೆ ವ್ಯಂಗ್ಯವಾಡಿ ಮಾಜಿ ಕಾಂಗ್ರೆಸ್ ನಾಯಕರ ಡಿಎನ್‌ಎ “ಮೋದಿ-ಫೈಡ್” ಎಂದು ಹೇಳಿದ್ದರು.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಆಜಾದ್, ಕಾಂಗ್ರೆಸ್ ತನ್ನ ನಾಯಕರನ್ನು ಗೌರವಿಸುವುದಿಲ್ಲ ಮತ್ತು ಪಕ್ಷಕ್ಕೆ ನಾವು ನೀಡಿದ ಕೊಡುಗೆಯ ಬಗ್ಗೆ ಜನರಿಗೆ ತಿಳಿದಿಲ್ಲ ಎಂದು ಹೇಳಿದರು. ಪ್ರಧಾನಿಯನ್ನು ಶ್ಲಾಘಿಸಿದ ಅವರು, “ಮೋದಿ ಅವರು ಮದುವೆಯಾಗಿಲ್ಲ, ಮಕ್ಕಳನ್ನೂ ಹೊಂದಿಲ್ಲ, ಆದರೆ ಅವರು ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತಿನ ಪ್ರವಾಸಿಗರೊಂದಿಗೆ ನಡೆದ ಘಟನೆಯ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಾಗ ಅವರು ತಮ್ಮ ಮಾನವೀಯತೆಯನ್ನು ತೋರಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next