Advertisement

ಪುನೀತ್‍ ಭಾವಚಿತ್ರದೊಂದಿಗೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ ಬಾಲಕ !

07:46 PM Jan 13, 2022 | Team Udayavani |

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದ 13 ವರ್ಷದ ಅಯ್ಯಪ್ಪಸ್ವಾಮಿ ಮಾಲಾಧಾರಿ ಬಾಲಕ ಅಭಿಷೇಕ ತನ್ನ ನೆಚ್ಚಿನ ನಾಯಕ ನಟ ಪುನೀತ್ ರಾಜಕುಮಾರ ಅವರ ಭಾವಚಿತ್ರ ಸಮೇತ ಶಬರಿಮಲೈನಲ್ಲಿರುವ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ತೆರಳಿದ್ದಾನೆ.

Advertisement

ಅಭಿಷೇಕನ ತಂದೆ ಮಲ್ಲಿಕಾರ್ಜುನ ಗಂಗನಗೌಡರ ಅವರು ಕಳೆದ 25 ವರ್ಷಗಳಿಂದ ನಿರಂತರ ಅಯ್ಯಪ್ಪನ ದರ್ಶನಕ್ಕೆ ಮಾಲಾಧಾರಿಯಾಗಿ ಹೋಗಿ ಬರುತ್ತಾರೆ. ಈ ಬಾರಿ ತಂದೆಯೊಂದಿಗೆ ಮಾಲಾಧಾರಿಯಾಗಿ ಹೊರಟು ನಿಂತ ಅಭಿಷೇಕನು ಪುನೀತ್ ರಾಜಕುಮಾರ್ ಕೂಡ ಪ್ರತಿ ವರ್ಷ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದರು. ಸಣ್ಣ ವಯಸ್ಸಿನಿಂದಲೂ ಮಾಲೆ ಹಾಕಿ ಅಣ್ಣ ಶಿವರಾಜ್ ಕುಮಾರ್ ಜೊತೆ, ತಮ್ಮ ತಂದೆ ಡಾ| ರಾಜಕುಮಾರ್ ಜೊತೆ ಅಪ್ಪು ಶಬರಿಮಲೈ ಯಾತ್ರೆ ಮಾಡಿದ್ದನ್ನು ಟಿವಿಯಲ್ಲಿ ನೋಡಿರುವೆ .ಈ ಸಾರಿ ನನ್ನೊಂದಿಗೆ ಅಪ್ಪು ಸರ್ ಹದಿನೆಂಟು ಮೆಟ್ಟಿಲುಗಳನ್ನು ಏರಿ ಬರಲಿ. ಅವರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಸುವೆ ಎಂದು ಮುಗ್ಧತೆಯಿಂದ ಹೇಳಿ ತಮ್ಮ ಭಕ್ತಿಪ್ರದರ್ಶನ ಮಾಡಿದ್ದಾನೆ.

ಇದನ್ನೂ ಓದಿ : ಹಾಸನ : ಯುವಕನ ಬೆತ್ತಲೆ ಥಳಿತ, ಎಫ್ಐಆರ್‌ ದಾಖಲು : ಓರ್ವ ಆರೋಪಿಯ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next