Advertisement

ಗರಿಷ್ಠ ಪ್ರಮಾಣದಲ್ಲಿ ಆಯುಷ್ಮಾನ್‌ ಕಾರ್ಡ್‌ ನೀಡಿ

04:15 PM May 18, 2022 | Team Udayavani |

ತುಮಕೂರು: ಜಿಲ್ಲೆಯ ಜನರ ಆರೋಗ್ಯ ರಕ್ಷಣೆಗಾಗಿ ಗ್ರಾಮ-ಒನ್‌, ತುಮಕೂರು ಒನ್‌, ಸಾಮಾನ್ಯ ಸೇವಾಕೇಂದ್ರ, ತಾಲೂಕು ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗಳಮೂಲಕ ಅರ್ಹರಿಗೆ ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಿಸಲುತುರ್ತಾಗಿ ಕ್ರಮಕೈಗೊಳ್ಳಲು ಆಯಾ ತಹಶೀಲ್ದಾರ್‌,ತಾಪಂ ಇಒ, ಪಾಲಿಕೆ ಆಯುಕ್ತರು, ಮುಖ್ಯಾಧಿಕಾರಿ ಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿಈಗಾಗಲೇ 7 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿದ್ದು,ತಾಲೂಕುವಾರು, ಗ್ರಾಮವಾರು ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು.

ಲಸಿಕೆ ಪ್ರಗತಿ ಸಾಧಿಸಿ: ಕೋವಿಡ್‌-19 ತಡೆಗಟ್ಟಲು ಲಸಿಕಾಕರಣ ಮುಂದುವರಿದಿದ್ದು, 12 ರಿಂದ 14 ಮತ್ತು 15-17 ವಯಸ್ಸಿನೊಳಗಿನ ಮಕ್ಕಳಿಗೆ ನೀಡುವಲಸಿಕೆಯನ್ನು ಶೇ.100 ಪೂರ್ಣಗೊಳಿಸಬೇಕು ಎಂದರಲ್ಲದೇ, 16ರಿಂದ ಶಾಲೆಗಳು ಪ್ರಾರಂಭವಾಗಿದ್ದು, ಎಲ್ಲಾತಾಲೂಕು ವೈದ್ಯಾಧಿಕಾರಿಗಳು, ತಹಶೀಲ್ದಾರರು,ತಾಪಂ ಇಒಗಳು, ತಾಲೂಕು ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ವ್ಯಾಕ್ಸಿನೇಷನ್‌ ಪ್ರಗತಿ ಸಾಧಿಸಲು ಸೂಚಿಸಿದರು.

ನಿವೇಶನ ಗುರುತಿಸಲು ನಿರ್ದೇಶನ: ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಒದಗಿಸುವ ಬಗ್ಗೆಮಾತನಾಡಿದ ಜಿಲ್ಲಾಧಿಕಾರಿ, ಗ್ರಾಮೀಣ ಮತ್ತು ನಗರಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಬೇಕಾಗಿದ್ದು, ನಗರ ವ್ಯಾಪ್ತಿಯಲ್ಲಿ ಪಾಲಿಕೆ, ನಗರಸಭೆ,ಪುರಸಭೆ, ಪಟ್ಟಣ ಪಂಚಾಯ್ತಿಗಳ ಆಯುಕ್ತರು,ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಗ್ರಾಪಂವ್ಯಾಪ್ತಿಯಲ್ಲಿ ಪಿಡಿಒಗಳಿಗೆ ನಿವೇಶನ ಗುರುತಿಸುವಂತೆ ನಿರ್ದೇಶಿಸಿದರು.

ಕಟ್ಟಡ ನವೀಕರಣಕ್ಕೆ ಸೂಚನೆ: ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಸಣ್ಣ ಪ್ರಮಾಣದ ದುರಸ್ತಿ ಕಾರ್ಯಅಗತ್ಯವಾಗಿದ್ದು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌, ತಾಪಂ ಇಒ ಎಸ್‌ಡಿಎಂಸಿ ಸಭೆ ಕರೆದು ಕಟ್ಟಡನವೀಕರಣಕ್ಕೆ ಕ್ರಮವಹಿಸುವಂತೆ ಸೂಚಿಸಿದರು.ಶೀಘ್ರ ವಿಲೇವಾರಿ ಮಾಡಿ: ಸಮಗ್ರ ಸಾರ್ವಜನಿಕಕುಂದು-ಕೊರತೆ ನಿವಾರಣ ವ್ಯವಸ್ಥೆಯಡಿ 53 ಅರ್ಜಿಗಳು ಬಾಕಿಯಿದ್ದು, ಕೂಡಲೇ ಇತ್ಯರ್ಥಗೊಳಿಸುವಂತೆಆಯಾ ತಹಶೀಲ್ದಾರರಿಗೆ ಸೂಚಿಸಿದರಲ್ಲದೇ,ಸಾಮಾಜಿಕ ಭದ್ರತಾ ಯೋಜನೆಯಡಿ 423 ಆಧಾರ್‌ ಸೀಡಿಂಗ್‌ ಪ್ರಕರಣಗಳು ಇದ್ದು, ಶೀಘ್ರವಾಗಿ ವಿಲೇವಾರಿ ಮಾಡುವಂತೆ ತಿಳಿಸಿದರು.

Advertisement

ಕೋವಿಡ್‌ ಪರಿಹಾರ ವಿತರಣೆ: ಅಪರ ಜಿಲ್ಲಾಧಿಕಾರಿಕೆ.ಚನ್ನಬಸಪ್ಪ ಮಾತನಾಡಿ, ಕೋವಿಡ್‌ ಪರಿಹಾರಪಾವತಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೆ1282 ಪ್ರಕರಣಗಳಿಗೆ ಪರಿಹಾರ ಪಾವತಿಸಲಾಗಿದೆ. 230 ಪ್ರಕರಣಗಳು ಬಾಕಿಯಿದೆ ಎಂದು ಹೇಳಿದರು.ಭೂಮಿ ಯೋಜನೆ, ಪಹಣಿ ಕಾಲಂ 3/9 ಮಿಸ್‌ಮ್ಯಾಚ್‌ ವಿಲೇವಾರಿ, ಪೈಕಿ ಪಹಣಿ ಒಟ್ಟುಗೂಡಿಸುವಿಕೆ,11ಇಗೆ ಸಂಬಂಧಿಸಿದಂತೆ ಆರ್‌.ಟಿ.ಸಿ ತಿದ್ದುಪಡಿಪ್ರಕರಣ, ಕಂದಾಯ ಗ್ರಾಮಗಳ ರಚನೆ ಸಂಬಂಧ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ,ಉಪವಿಭಾಗಾಧಿಕಾರಿ ವಿ.ಅಜಯ್‌, ತಹಶೀಲ್ದಾರರಾದಜಿ.ವಿ.ಮೋಹನ್‌ ಕುಮಾರ್‌, ಎಂ.ಮಮತಾ, ಪಾಲಿಕೆಆಯುಕ್ತೆ ರೇಣುಕಾ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ,ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್‌.ಆಂಜನಪ್ಪ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next