Advertisement

ಮಧುಮೇಹಕ್ಕೆ “ಆಯುಷ್‌ ಡಿ’ರಾಮಬಾಣ

06:30 AM Jan 14, 2018 | |

ಬೆಂಗಳೂರು: ಬದಲಾದ ಜೀವನ ಕ್ರಮ ಹಾಗೂ ಒತ್ತಡ ಇತ್ತೀಚೆಗೆ ಎಲ್ಲ ವಯೋಮಾನದವರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಅಪಾಯಕಾರಿ “ಟೈಪ್‌-2 ಮಧುಮೇಹ’ ನಡುಕ ಹುಟ್ಟಿಸುತ್ತಿದೆ. ಇದಕ್ಕೀಗ ಕೇಂದ್ರ ಆಯುಷ್‌ ಇಲಾಖೆ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಔಷಧವೊಂದನ್ನು ಸಿದಟಛಿಪಡಿಸಿದೆ.

Advertisement

ಟೈಪ್‌-2 ಮಧುಮೇಹದಿಂದ ದೇಹದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಗಂಭೀರತೆ ಅರಿತಿರುವ ಕೇಂದ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಪರಿಷತ್‌ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ತಜ್ಞ ವಿಜ್ಞಾನಿಗಳ ತಂಡ ಇದಕ್ಕೆ ರಾಮಬಾಣವಾಗಬಲ್ಲ “ಆಯುಷ್‌ ಡಿ’ ಎಂಬ ಔಷಧಿಯನ್ನು ಸಂಶೋಧಿಸಿದೆ.

ಕಳೆದ ಎರಡು ವರ್ಷಗಳಿಂದ ವೈದ್ಯರು, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಆಯುರ್ವೇದ ವಿಜ್ಞಾನಿಗಳನ್ನೊಳ ಗೊಂಡ ಸುಮಾರು 100 ತಜ್ಞರ ತಂಡ ಈ ಔಷಧ ತಯಾರಿಕೆ ಪ್ರಯೋಗದಲ್ಲಿ ನಿರತವಾಗಿ ನಾಟಿ ವೈದ್ಯರ ಸಹಾಯ ಪಡೆದು ಪಾರಂಪರಿಕ ವೈದ್ಯ ಪದಟಛಿತಿಯ ಆಧಾರದ ಮೇಲೆ ಸಂಶೋಧನೆ ನಡೆಸಿ “ಆಯುಷ್‌ ಡಿ’ ಔಷಧ ಸಿದ್ಧಪಡಿಸಿದೆ.

ಇಲಿಯ ಮೇಲೆ ಪ್ರಯೋಗ: ಈಗಾಗಲೇ ಇಲಿ ಮೇಲೆ ಈ ಔಷಧ ಪ್ರಯೋಗ ಮಾಡಲಾಗಿದ್ದು,ಶೇ. 90ರಷ್ಟು ಯಶಸ್ವಿಯಾಗಿದೆ. ಇದರ  ಸಾಧಕ-ಬಾಧಕಗಳ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಿ ಎರಡು ವರ್ಷಗಳಲ್ಲಿ ಈ ತಂಡ “ಆಯುಷ್‌ ಡಿ’ ಔಷಧಿಯನು ° ಜನರ ಮುಂದೆ ಇಡಲಿದೆ.ಬೆಳಗಾವಿಯ ಕೆಎಲ್‌ಇ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು ಡಿ.23 ರಂದು ನಡೆದ ಆಯುಷ್‌ ಅನ್ವೇಷಕರ ತರಬೇತಿ ಕಾರ್ಯಾಗಾರದಲ್ಲಿ ಆಯುಷ್‌ ಸಚಿವಾಲಯದ ಕೇಂದ್ರೀಯ ಆಯುರ್ವೇದ ವಿಜ್ಞಾನಿಗಳ ಸಂಶೋಧನಾ ಪರಿಷತ್‌ ಮಹಾ ನಿರ್ದೇಶಕ ಕೆ.ಎಸ್‌.ಧಿಮಾನ್‌ ಅವರ ಸಮ್ಮುಖದಲ್ಲಿ ಈ ಔಷಧ ಪ್ರಯೋಗ ನಡೆಸಲಾಗಿದೆ. ಈ ಮೂಲಕ ಆಯುಷ್‌ ಡಿ ಔಷಧದ ಗುಣಮಟ್ಟ ಖಾತರಿಪಡಿಸಿಕೊಳ್ಳಲಾಗಿದೆ ಎಂದು ಸಂಶೋಧನಾ ವಿಜ್ಞಾನಿ ಡಾ.ಕಿಶೋರ್‌ ಕುಮಾರ್‌ ಆರ್‌. ತಿಳಿಸಿದ್ದಾರೆ.

ಮಧುಮೇಹ ದ್ವಿಗುಣ: ಮಧುಮೇಹದಿಂದಜಗತ್ತಿನಲ್ಲಿ 150 ದಶಲಕ್ಷ ಜನರು ಬಳಲುತ್ತಿದ್ದು, ಈ  ಸಂಖ್ಯೆ 2025ಕ್ಕೆ 300 ದಶಲಕ್ಷ ತಲುಪುವ ಸಾಧ್ಯತೆ ಇದೆ. ಭಾರತದಲ್ಲೂ ದಿನದಿಂದ ದಿನಕ್ಕೆ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎಂದು ಸಂಶೋಧನಾ ತಂಡದ ಸದಸ್ಯೆ ಡಾ.ಸುಲೋಚನಾ ಭಟ್‌ ಹೇಳಿದ್ದಾರೆ.

Advertisement

ಏನಿದು ಟೈಪ್‌-2 ಮಧುಮೇಹ
ಟೈಪ್‌-2 ಮಧುಮೇಹ ವಯಸ್ಸಿನ ಮೀತಿ ಮೀರಿ ಜನರನ್ನು ತೊಂದರೆಗೀಡು ಮಾಡಬಹುದು. ಈ ರೋಗದ ಮುನ್ಸೂಚನೆ ಅಥವಾ ಲಕ್ಷಣಗಳು ಕಾಣುವುದಿಲ್ಲ. ನಮ್ಮ ದೇಹದಲ್ಲಿರುವ ಕಾಬೋìಹೈಡ್ರೇಟ್‌ಗಳನ್ನು ಜೀರ್ಣಮಾಡಿ ಅದನ್ನು ಶಕ್ತಿ ರೂಪಕ್ಕೆ ಪರಿವರ್ತಿಸುವ ಕೆಲಸದ ಮೇಲೆ ಇದು ಪ್ರಭಾವ ಬೀರುತ್ತದೆ. ಇದರ ಪರಿಣಾಮದಿಂದಾಗಿ ರಕ್ತದಲ್ಲಿ ಗುÉಕೋಸ್‌ ಪ್ರಮಾಣ ಹೆಚ್ಚಾಗುತ್ತದೆ. ಇದು ಮನುಷ್ಯ ಸಂಬಂಧಿ ರೋಗಗಳು, ದೃಷ್ಟಿದೋಷ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ.

ಮಾರುಕಟ್ಟೆಯಲ್ಲೀಗ ಹಲವು ರೀತಿಯ ಟೈಪ್‌-2 ಮಧುಮೇಹದ ಔಷಧಿಗಳಿದ್ದು, ಮುಂದಿನ ದಿನಗಳಲ್ಲಿ ಇವೆಲ್ಲವುಗಳಿಗಿಂತ “ಆಯುಷ್‌ ಡಿ’ ಹೆಚ್ಚಿನ ಪರಿಣಾಮಕಾರಿ ಆಗಿರಲಿದೆ.
–  ಡಾ.ಕಿಶೋರ್‌ಕುಮಾರ್‌,
ಸಂಶೋಧನಾ ವಿಜ್ಞಾನಿ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next