Advertisement

ಇನ್ನು ಮುಂದೆ ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ಅವಕಾಶ! ಕೇಂದ್ರ ಸರಕಾರದ ಮಹತ್ವದ ಸೂಚನೆ

09:39 PM Nov 21, 2020 | sudhir |

ನವದೆಹಲಿ: ಇನ್ನು ಮುಂದೆ ಆಯುರ್ವೇದ ವೈದ್ಯರೂ ಶಸ್ತ್ರಚಿಕಿತ್ಸೆ ಮಾಡಬಹುದು…!
ಹೌದು, ಕೇಂದ್ರ ಸರ್ಕಾರ ಭಾರತೀಯ ವೈದ್ಯಕೀಯ ಕೇಂದ್ರ ಮಂಡಳಿ(ಆಯುರ್ವೇದ ಶಿಕ್ಷಣದ ಸ್ನಾತಕೋತ್ತರ) ನಿಯಮಾವಳಿ, 2016ಕ್ಕೆ ತಿದ್ದುಪಡಿ ತಂದಿದ್ದು, ಇದರಂತೆ ಸದ್ಯ ಸ್ನಾತಕೋತ್ತರ ಪದವಿ ಮಾಡುತ್ತಿರುವ ಆಯುರ್ವೇದ ವೈದ್ಯ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕಲಿಯಲು ಅವಕಾಶ ಮಾಡಿಕೊಡಲಾಗಿದೆ. ಇದರಂತೆ ಹಾಲಿ ಇರುವ ಪಠ್ಯಕ್ರಮದಲ್ಲೇ ಶಲ್ಯ’-ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಶಾಲಕ್ಯ’-ಕಿವಿ, ಮೂಗು, ಗಂಟಲು (ಇಎನ್‌ಟಿ), ಕಣ್ಣು, ತಲೆ ಮತ್ತು ಹಲ್ಲು ನೋವಿಗೆ ಆಪರೇಶನ್‌ ಮಾಡುವ ಚಿಕಿತ್ಸಾ ವಿಧಾನ ಹೇಳಿಕೊಡಲಾಗುತ್ತದೆ.

Advertisement

ಈ ಸಂಬಂಧ ನವೆಂಬರ್‌ 19ರಂದು ಕೇಂದ್ರ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಇದರಂತೆ, ಶಲ್ಯ ಮತ್ತು ಶಾಲಕ್ಯ ಪದವಿ ಓದುವವರಿಗೆ ಸ್ವತಂತ್ರವಾಗಿ ಶಸ್ತ್ರಚಿಕಿತ್ಸೆ ಮಾಡುವಂಥ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಇವರು, ತಮ್ಮ ಪದವಿ ಮುಗಿಸಿದ ಬಳಿಕ ಶಸ್ತ್ರ ಚಿಕಿತ್ಸೆ ನಡೆಸಬಹುದು” ಎಂದು ತಿಳಿಸಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಆಯುರ್ವೇದ ವೈದ್ಯರು ಚರ್ಮದ ಕಸಿ, ಕಣ್ಣಿನ ಕ್ಯಾಟರ್ಯಾಕ್ಟ್ ಸರ್ಜರಿ, ಹಲ್ಲಿನ ರೂಟ್‌ ಕೆನಲ್‌ ಪ್ರಕ್ರಿಯೆ ನಡೆಸಬಹುದು.

ಶಲ್ಯದಲ್ಲಿ ಕಲಿಯುವುದೇನು?
ಡೆಬ್ರಿಡೆಮೆಂಟ್‌, ಫ್ಯಾಸಿಯೋಟಮಿ, ಕರ್ರೆಟೇಜ್‌, ಗುದದ್ವಾರದ ಬಾವು, ಸ್ತನ ಬಾವು, ಕಂಕುಳಿನ ಬಾವು, ಜೀವಕೋಶಗಳ ಉರಿಯೂತ, ಎಲ್ಲಾ ರೀತಿಯ ಚರ್ಮದ ಕಸಿ, ಗ್ಯಾಂಗ್ರೀನ್‌, ಹೊಲಿಗೆ, ರಕ್ತಸ್ತಂಭಕ ಅಸ್ಥಿರಜ್ಜು, ರಕ್ತನಾಳ ಕಟ್ಟು, ಸ್ನಾಯುರಜ್ಜು ಮತ್ತು ಸ್ನಾಯುಗಳ ಚಿಕಿತ್ಸೆ, ಪ್ರಮುಖವಲ್ಲದ ಅಂಗಗಳಿಂದ ಲೋಹದ ಅಥವಾ ಲೋಹೇತರ ಬಾಹ್ಯವಸ್ತುಗಳನ್ನು ಹೊರತೆಗೆಯುವುದು, ಕೀಲು ತಪ್ಪಿದ್ದರೆ ಸರಿಪಡಿಸುವುದು, ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ, ಸ್ಕೆರೋಥೆರಪಿ, ಐಆರ್‌ಸಿ, ರೇಡಿಯೋ ಫ್ರಿಕ್ವೇನ್ಸಿ, ಲೇಸರ್‌ ಅಬ್ಲೇಷನ್‌, ಸ್ತನದ ಗೆಡ್ಡೆ ತೆಗೆಯುವುದು, ಅಪೆಂಡಿಸೆಕ್ಟಮಿ, ಕೋಲೋಸಿಸ್ಟೆಕ್ಟಮಿ ಸೇರಿದಂತೆ ಇನ್ನೂ ಹಲವಾರು ಚಿಕಿತ್ಸಾ ವಿಧಾನಗಳನ್ನು ಕಲಿಸಲಾಗುತ್ತದೆ.

ಶಾಲ್ಯಕ ತಂತ್ರದಲ್ಲಿ ಕಲಿಯುವುದು
ಕಣ್ಣು : ಸ್ಲಿಂಗ್‌ ಸರ್ಜರಿ, ಕರೆಕ್ಷನ್‌ ಸರ್ಜರಿ, ಇನ್ಸಿಶನ್‌ ಮತ್ತು ಡ್ರೈನೇಜ್‌, ಕರ್ರೆಟೇಜ್‌, ಬೆನಿನ್‌ ಲಿಡ್‌ ಟ್ಯೂಮರ್‌, ಎಕ್ಸಿಶನ್‌ ಸರ್ಜರಿ. ಐರಿಸ್‌ ಫೊಲ್ಯಾಪ್ಸ್‌, ಎಕ್ಸಿಸಿಶನ್‌ ಸರ್ಜರಿ, ಗುಕೋಮಾ-ಟ್ರೇಬೆಕ್ಯುಲೆಕ್ಟಮಿ, ಹುಬ್ಬುಗಳಿಗೆ ಗಾಯ, ಲಿಡ್‌, ಕಾಂಜುಕ್ಟೀವಾ, ಕಾರ್ನಿಯಾ-ಟ್ರಾಮಾ ರಿಪೇರ್‌ ಸರ್ಜರಿ, ಕ್ಯಾಟರ್ಯಾಕ್ಟ್ ಸರ್ಜರಿ, ಕಣ್ಣಿನ ಲೋಕಲ್‌ ಅನಸ್ತೇಷಿಯಾ.

Advertisement

ಮೂಗು : ಸೆಪ್ಟೋಪ್ಲಾಸ್ಟಿ, ನಾಸಲ್‌ ಪೋಲಿಪ್‌ ಪಾಲಿಪೆಕ್ಟಮಿ, ರಿನೋಪ್ಲಾಸ್ಟಿ

ಕಿವಿ: ಲೊಬ್ಯುಲೋಪ್ಲಾಸ್ಟಿ, ಟಾರ್ನ್ ಇಯರ್‌ ಲಾಬುಲ್‌-ಲಾಬುಲೋ ಪ್ಲಾಸ್ಟಿ, ಗ್ಲೂ ಇಯರ್‌.

ಗಂಟಲು : ಫಾರಿಂಕ್ಸ್‌: ಪೆರಿಟಾನ್ಸಿಲ್ಲರ್‌ ಬಾವು, ಕ್ವಿಂಚಿ, ಇನ್ಸಿಶನ್‌ ಮತ್ತು ಡ್ರೈನೇಜ್‌; ಕ್ರೋನಿಕ್‌ ಟಾನ್ಸಿಲಿಟಿಸ್‌-ಟಾನ್ಸಿಲಿಕ್ಟೋಮಿ, ಹೇರ್‌ಲಿಪ್‌ ರಿಪೇರ್‌

ಹಲ್ಲು : ಲೂಸ್‌ ಟೂಥ್‌ ಎಕ್ಟ್ರಾಕ್ಷನ್‌, ಕ್ಯಾರೀಸ್‌ ಟೂಥ್‌/ಟೀಥ್‌-ರೂಟ್‌ ಕೆನಲ್‌ ಟ್ರೀಟ್‌ಮೆಂಟ್‌.

Advertisement

Udayavani is now on Telegram. Click here to join our channel and stay updated with the latest news.

Next