Advertisement

ಈ ಬಾರಿಯ ಅಯೋಧ್ಯೆಯಲ್ಲಿ ವಿಶೇಷ ದೀಪಾವಳಿ

11:12 PM Oct 22, 2022 | Team Udayavani |

ಅಯೋಧ್ಯೆ: ಈ ಬಾರಿಯ ಅಯೋಧ್ಯೆಯಲ್ಲಿ ವಿಶೇಷ ದೀಪಾವಳಿ. ದೀಪಾವಳಿಗೂ ಅಯೋಧ್ಯೆಗೂ ಅವಿನಾಭಾವ ಸಂಬಂಧ. ಶ್ರೀ ರಾಮ ಮತ್ತೆ ಪಟ್ಟಾಭಿಷೇಕಗೊಂಡ ದಿನವೂ ಹೌದು ಎಂದು ಸಂಭ್ರಮಿಸಲಾಗುತ್ತದೆ. ಹಾಗಾಗಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಆರನೇ ದೀಪೋತ್ಸವದ ಸಂಭ್ರಮ ಮತ್ತಷ್ಟು ಹೆಚ್ಚಿದೆ. ಅದರ ಕೆಲವು ವಿಶೇಷ ಅಂಶಗಳು ಇಲ್ಲಿವೆ.

Advertisement

01. ಸರಯೂ ನದಿ ತೀರದ ರಾಮ್‌ ಕಿ ಪೌದಿಯಲ್ಲಿ ಸುಮಾರು 22 ಸಾವಿರ ಮಂದಿ ಸ್ವಯಂ ಸೇವಕರು 15 ಲಕ್ಷ ಹಣತೆಗಳನ್ನು ಬೆಳಗುವರು.
02. ಒಂದೊಂದು ಚೌಕದಲ್ಲಿ 256 ದೀಪಗಳಂತೆ ಚೌಕವನ್ನು ನಿರ್ಮಿಸಿ ವಿನ್ಯಾಸಗೊಳಿಸುತ್ತಿರುವುದು ಮತ್ತೂಂದು ವಿಶೇಷ.
03. ಬರೀ ಹಣತೆಗಳಷ್ಟೆ ಅಲ್ಲ ; ಲೇಸರ್‌ ಶೋ ಹಾಗೂ ಬಾಣ ಬಿರುಸು ಪ್ರದರ್ಶನ ಇರಲಿದೆ.
04. ಮತ್ತೊಂದು ವಿಶೇಷವೆಂದರೆ ಪ್ರಸಿದ್ಧ ರಾಮ್‌ ಲೀಲಾವನ್ನು ನಮ್ಮ ದೇಶದ್ದಲ್ಲದೇ ರಷ್ಯಾದ ತಂಡವೂ ಪ್ರದರ್ಶಿಸಲಿದೆ.
05. ಅಯೋಧ್ಯೆಯ ರಾಮಮಂದಿರದೊಳಗಿರುವ ರಾಮಲಲ್ಲಾ ಕೆಂಪು-ಗುಲಾಬಿ ಬಣ್ಣದ ವಿಶೇಷ ದಿರಿಸಿನಲ್ಲಿ ಕಂಗೊಳಿಸಲಿದ್ದಾನೆ.
06. ಪ್ರಧಾನಿ ಮೋದಿ ರವಿವಾರ ರಾಮಲಲ್ಲಾನಿಗೆ ಪೂಜೆ ಸಲ್ಲಿಸುವರು. ಸಂಜೆ ನಡೆಯುವ ಸರಯೂ ತಟದ ಆರತಿಯಲ್ಲೂ ಪಾಲ್ಗೊಳ್ಳುವರು. ಸ್ತಬ್ಧಚಿತ್ರ ಇತ್ಯಾದಿ ಹಲವು ವಿಶೇಷಗಳು ದೀಪಾವಳಿಯಲ್ಲಿರಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next