ಅಯೋಧ್ಯೆ : ಆಘಾತಕಾರಿ ಘಟನೆಯೊಂದರಲ್ಲಿ 28 ವರ್ಷದ ದೇವಸ್ಥಾನದ ಅರ್ಚಕರೊಬ್ಬರು ಫೇಸ್ ಬುಕ್ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಅಯೋಧ್ಯೆಯ ಕೊಟ್ವಾಲಿ ಪ್ರದೇಶದ ರಾಯಗಂಜ್ ಚೌಕಿ ಬಳಿ ನಡೆದಿದೆ
ಆತ್ಮಹತ್ಯೆ ಮಾಡಿಕೊಂಡ ಅರ್ಚಕನನ್ನು ರಾಮ್ ಶಂಕರ್ ದಾಸ್ (28) ಎನ್ನಲಾಗಿದ್ದು ಇವರು ಇಲ್ಲಿನ ನರಸಿಂಹ ದೇವಸ್ಥಾನದ ಅರ್ಚಕರಾಗಿದ್ದರು.
ಕೆಲ ದಿನಗಳ ಹಿಂದೆ ರಾಮ್ ಶಂಕರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಕಿರುಕುಳ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು ಈ ವಿಚಾರದಲ್ಲಿ ಪೊಲೀಸರು ಅರ್ಚಕ ರಾಮ್ ಶಂಕರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು ಇದರಿಂದ ಅರ್ಚಕ ಮನನೊಂದಿದ್ದರು ಎಂದು ಹೇಳಲಾಗಿದೆ.
ಆದರೆ ಸೋಮವಾರ ದೇವಸ್ಥಾನದ ಒಳಗಿನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ವೇಳೆ ಅರ್ಚಕ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ದಾಸ್ ಅವರು ತಮ್ಮ ಫೇಸ್‌ಬುಕ್ ಲೈವ್‌ನಲ್ಲಿ ರಾಯ್‌ಗಂಜ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವಾರಿ ಮತ್ತು ಕಾನ್‌ಸ್ಟೆಬಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪ್ರಕರಣ ಕುರಿತು ಕೋಟ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನೋಜ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ಅರ್ಚಕ ರಾಮ್ ಶಂಕರ್ ದಾಸ್ ಮಾದಕ ವ್ಯಸನಿಯಾಗಿದ್ದು, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರ ವಿರುದ್ಧ ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ಎರಡು ದಿನಗಳಿಂದ ರಾಮ್ ಶಂಕರ್ ದಾಸ್ ದೇವಸ್ಥಾನಕ್ಕೆ ಬಂದಿರಲಿಲ್ಲ ಈ ಹಿನ್ನೆಲೆಯಲ್ಲಿ ಪೊಲೀಸರು ದೇವಸ್ಥಾನದ ಕೊಠಡಿ ಬಾಗಿಲು ತೆರೆದಾಗ ಅವರು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಇದನ್ನೂ ಓದಿ: ಜನಪರ ಆಡಳಿತ, ಹಿಂದುತ್ವದ ಉಳಿವಿಗಾಗಿ ಗುರ್ಮೆ ಅವರನ್ನು ಗೆಲ್ಲಿಸೋಣ : ಹರಿಕೃಷ್ಣ ಬಂಟ್ವಾಳ