ಉಡುಪಿ: ಅಯೋಧ್ಯ ಶ್ರೀ ರಾಮ ಸೇವಾ ಸಂಕಲ್ಪ ಅಭಿಯಾನದಡಿ ಕಲ್ಯಾಣಪುರ ಗಿರಿಜಾ ಪೂಜಾರ್ತಿ ಅವರಿಗೆ ನಿರ್ಮಿಸಲಾಗುತ್ತಿರುವ ಮನೆಗೆ ರವಿವಾರ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶಾಸಕ ಕೆ. ರಘುಪತಿ ಭಟ್ ಶಿಲಾನ್ಯಾಸವನ್ನು ನೆರವೇರಿಸಿದರು.
ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ 2024 ಜನವರಿ ವೇಳೆಗೆ ಪೂರ್ಣಗೊಂಡು, ಅಯೋಧ್ಯಾಧಿಪತಿ ಶ್ರೀ ರಾಮಚಂದ್ರರ ಭವ್ಯ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಪ್ರಸ್ತುತ ಇರುವ ಈ ಒಂದು ವರ್ಷದ ಅವಧಿಯಲ್ಲಿ ದೇಶದಾದ್ಯಂತ ರಾಮ ರಾಜ್ಯದ ನಿರ್ಮಾಣದ ಕನಸಿನ ನೆಲೆಯಲ್ಲಿ ವ್ಯಕ್ತಿಗತವಾಗಿ ಹಾಗೂ ಸಂಘ ಸಂಸ್ಥೆಗಳು ಸೇರಿ ಒಂದಷ್ಟು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎನ್ನುವ ಆಶಯದಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರು ಅಯೋಧ್ಯ ಶ್ರೀ ರಾಮ ಸೇವಾ ಸಂಕಲ್ಪ ಅಭಿಯಾನ ಸಂಯೋಜಿಸಿದ್ದಾರೆ ಎಂದು ಶಾಸಕ ಭಟ್ ತಿಳಿಸಿದರು.
ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಉಪಾಧ್ಯಕ್ಷರಾದ ಉದಯ್ ಪೂಜಾರಿ, ಸದಸ್ಯರಾದ ನವೀನ್ ಕಾಂಚನ್, ಸತೀಶ್ ನಾಯ್ಕ್ , ಜಾನ್ಸನ್, ಪ್ರೇಮ ಕಿಶೋರ್, ರತ್ನ ಉಚ್ಚಿಲ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಜಯಂತಿ, ಪಕ್ಷದ ಹಿರಿಯರಾದ ಅಪ್ಪು ಜತ್ತನ್, ಕಿಶೋರ್, ಕೇಶವ ಪ್ರಭಾರಾವ್ ಹಾಗೂ ಸ್ಥಳೀಯ ಉಪಸ್ಥಿತರಿದ್ದರು.