Advertisement
ಶನಿವಾರದಿಂದ ಸೋಮವಾರದವರೆಗೆ ರಾಮ ಮಂದಿರಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಲಿದ್ದು, ಶನಿವಾರ ಬೆಳಿಗ್ಗೆ 10 ಗಂಟೆಗೆ ಬಾಲ ರಾಮನ ಮೂರ್ತಿಗೆ ಅಭಿಷೇಕ ಮಾಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅಭಿಷೇಕದ ಬಳಿಕ ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿರುವ ಪೀತಾಂಬರದಿಂದ ರಾಮನ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ. 12.20ಕ್ಕೆ ಮಹಾ ಮಂಗಳಾರತಿ ನಡೆಯಲಿದ್ದು, ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕೊಡಲಾಗುತ್ತದೆ.110 ಮಂದಿ ವಿಶೇಷ ಆಹ್ವಾನಿತರು: ರಾಮಮಂದಿರದ ಮೊದಲ ವಾರ್ಷಿಕೋತ್ಸವಕ್ಕೆ 110 ಮಂದಿಯನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ರಾಮಮಂದಿರ ಉದ್ಘಾಟನೆಯನ್ನು ತಪ್ಪಿಸಿಕೊಂಡ ವರನ್ನು ಆಹ್ವಾನಿಸಲಾಗಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಚಂಪತ್ ರಾಯ್ ಹೇಳಿದ್ದಾರೆ. ಈ ಬಾರಿ ಸಾರ್ವಜನಿಕರಿಗೂ ಅವಕಾಶ ಒದಗಿಸಲಾಗಿದೆ. ಅಂಗದ್ ತಿಲಾ ಬಳಿ 5,000 ಮಂದಿ ಕೂರಬಹುದಾದಷ್ಟು ದೊಡ್ಡ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. ಇದಲ್ಲದೇ ಯಾಗ ಮಂಟಪಗಳಲ್ಲಿ ನಿರಂತವಾಗಿ ನಡೆಯುವ ಹೋಮ, ಹವನಗಳನ್ನು ನೋಡಲು ಸಹ ಅವಕಾಶ ಒದಗಿಸಲಾಗಿದೆ.
Related Articles
ಕಳೆದ ವರ್ಷ ಜ.22ರಂದು ರಾಮಮಂದಿರವನ್ನು ಉದ್ಘಾಟನೆ ಮಾಡಲಾಗಿತ್ತು. ಆದರೆ ಹಿಂದೂ ಪಂಚಾಂಗದ ಪ್ರಕಾರ ಪುಷ್ಯ ಮಾಸದ ಶುಕ್ಲ ದ್ವಾದಶಿಯ ದಿನ ಬಾಲ ರಾಮನನ್ನು ಪ್ರತಿಷ್ಠಾಪಿಸ ಲಾಗಿತ್ತು. ಈ ವರ್ಷ ಜ.11ರಂದು ಈ ತಿಥಿ ಬಂದಿರುವ ಕಾರಣ ಜ.22ರ ಬದಲಿಗೆ ಜ.11ರಂದು ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.
Advertisement
ಹೇಗಿರಲಿದೆ ಕಾರ್ಯಕ್ರಮ?ಬಾಲ ರಾಮನ ಮೂರ್ತಿಗೆ ಯೋಗಿ ಅಭಿಷೇಕ
ಬಳಿಕ ಮೂರ್ತಿಗೆ ಪಂಡಿತರಿಂದ ಪೂಜೆ, ಅಲಂಕಾರ
ಚಿನ್ನ, ಬೆಳ್ಳಿ ಹೊಂದಿರುವ ಪೀತಾಂಬರದಿಂದ ಅಲಂಕಾರ
3 ದಿನವೂ ಮಧ್ಯಾಹ್ನ 2 ಗಂಟೆಗೆ ರಾಮಕಥಾ ಪಠಣೆ
ಇದಾದ ಬಳಿಕ ಪ್ರತಿನಿತ್ಯವೂ ಸಾಂಸ್ಕೃತಿ ಕಾರ್ಯಕ್ರಮ
ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲರಿಗೂ ಪ್ರಸಾದ ವಿತರಣೆ
ಯಾಗ ಮಂಟಪಗಳಲ್ಲಿ ವಿಶೇಷ ಪೂಜೆ, ಹೋಮ, ಹವನ ಲತಾ ಮಂಗೇಶ್ಕರ್ ಕೊನೇ ಹಾಡು ಇಂದು ಪ್ರಸಾರ
ವಾರ್ಷಿಕೋತ್ಸವ ಸಮಾರಂಭದಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಕೊನೇ ಹಾಡನ್ನು ಪ್ರಸಾರ ಮಾಡಲಾಗುತ್ತಿದೆ. ಇದು ಗಾಯಕಿಯ ಕೊನೇ ಆಸೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. 2022ರಲ್ಲಿ ಲತಾ ಅವರು ಮರಣ ಹೊಂದುವುದಕ್ಕೆ 8 ತಿಂಗಳ ಮೊದಲು ಈ ಹಾಡನ್ನು ರೆಕಾರ್ಡ್ ಮಾಡಿದ್ದರು. ಮಂದಿರ ಸಂಕೀರ್ಣದಲ್ಲಿರುವ ದೇಗುಲಗಳ ನಿರ್ಮಾಣಕ್ಕೆ ವೇಗ
ಅಯೋಧ್ಯೆಯ ರಾಮಮಂದಿರ ಸಂಕೀರ್ಣದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಇತರ ದೇವಸ್ಥಾನಗಳ ನಿರ್ಮಾಣ ಕಾರ್ಯ ಅತ್ಯಂತ ವೇಗವಾಗಿ ಸಾಗುತ್ತಿದೆ. 6 ಮಂದಿ ಹಿಂದೂ ಸಂತರ ದೇವಸ್ಥಾನಗಳನ್ನು ದೇವಸ್ಥಾನದ ಸುತ್ತ ನಿರ್ಮಾಣ ಮಾಡಲಾಗುತ್ತಿದೆ.