Advertisement

ಅಯೋಧ್ಯೆ ವಿವಾದ ಇತ್ಯರ್ಥದ ಸಂಧಾನ ವಿಫಲ, ಆ.6ರಿಂದ ನಿತ್ಯ ವಿಚಾರಣೆ: ಸುಪ್ರೀಂಕೋರ್ಟ್

09:53 AM Aug 03, 2019 | Team Udayavani |

ನವದೆಹಲಿ: ಅಯೋಧ್ಯೆ ದೇವಾಲಯ ಮತ್ತು ಮಸೀದಿಗೆ ಸಂಬಂಧಿಸಿದ ವಿವಾದ ಬಗೆಹರಿಸುವಲ್ಲಿ ಯಾವುದೇ ಪರಿಹಾರ ಕಾಣದೆ ಸಂಧಾನ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದ್ದು, ಆಗಸ್ಟ್ 6ರಿಂದ ದಶಕಗಳಷ್ಟು ಹಳೆಯದಾದ ವಿವಾದದ ವಿಚಾರಣೆಯನ್ನು ನಿತ್ಯ ನಡೆಸುವುದಾಗಿ ಘೋಷಿಸಿದೆ.

Advertisement

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ಆರು ನಿಮಿಷಗಳ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಸಂಧಾನ ಮಾತುಕತೆ ಯಾವುದೇ ರೀತಿಯ ಫಲಶ್ರುತಿ ತಂದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಜೆ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂಕೋರ್ಟ್ ನ ಪಂಚಪೀಠ, ಸಂಧಾನ ಆಯೋಗ ವಿವಾದಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸಿದೆ. ಆದರೆ ವಿವಾದ ಬಗೆಹರಿಸುವ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ತಿಳಿಸಿದೆ.

ಬಾಬರಿ ಮಸೀದಿಗೆ ಸಂಬಂಧಿಸಿದಂತೆ ವಾದ ಮಂಡಿಸಲು 20 ದಿನಗಳ ಕಾಲಾವಕಾಶ ಬೇಕಾಗಿದೆ ಎಂದು ಮುಸ್ಲಿಂ ಪರ ವಕೀಲರಾದ ರಾಜೀವ್ ಧವನ್ ಅಭಿಪ್ರಾಯ ಮಂಡಿಸಿದಾಗ, ಈ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ ಎಂದು ಸಿಜೆ ನೇತೃತ್ವದ ಪೀಠ ಹೇಳಿದೆ.

1992ರಲ್ಲಿ ಬಾಬರಿ ಮಸೀದಿ ಧ್ವಂಸದ ಪ್ರಕರಣ:

Advertisement

ಅಯೋಧ್ಯೆಯಲ್ಲಿ 16ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಬಾಬರಿ ಮಸೀದಿಯನ್ನು 1992ರಲ್ಲಿ ಹಿಂದೂ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಅದಕ್ಕೆ ಕಾರಣ ಅಯೋಧ್ಯೆ ಭಗವಾನ್ ರಾಮಜನ್ಮಭೂಮಿಯಾಗಿದೆ. ಈ ಪುರಾತನ ದೇವಾಲಯದ ಸ್ಥಳದಲ್ಲಿ ಬಾಬರಿ ಮಸೀದಿ ಕಟ್ಟಿದ್ದಾರೆಂಬುದು ಹಿಂದೂಗಳ ನಂಬಿಕೆಯಾಗಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣ ದೇಶಾದ್ಯಂತ ಕೋಮುಗಲಭೆಗೆ ಕಾರಣವಾಗಿ, ಅಂದಾಜು 2000 ಜನರು ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next