Advertisement

ಅಯೋಧ್ಯೆ, ಮಥುರಾದಲ್ಲಿ ಮದ್ಯ, ಮಾಂಸ ನಿಷೇಧ?

06:00 AM Nov 13, 2018 | |

ಲಕ್ನೋ: ಅಯೋಧ್ಯೆ ಮತ್ತು ಮಥುರಾಗಳಲ್ಲಿ ಮದ್ಯ, ಮಾಂಸಗಳಿಗೆ ಉತ್ತರ ಪ್ರದೇಶ ಸರ್ಕಾರ ನಿಷೇಧ ಹೇರುವ ಸಾಧ್ಯತೆ ಇದೆ. ಜತೆಗೆ ಎರಡೂ ಸ್ಥಳಗಳನ್ನು ಪವಿತ್ರ ಕ್ಷೇತ್ರಗಳು ಎಂದು ಘೋಷಣೆ ಮಾಡುವ ಇರಾದೆಯನ್ನು ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಹೊಂದಿದೆ. ಉತ್ತರ ಪ್ರದೇಶ ಇಂಧನ ಸಚಿವ ಶ್ರೀಕಾಂತ್‌ ಶರ್ಮಾ ಸೋಮವಾರ ಲಕ್ನೋದಲ್ಲಿ ಈ ಮಾಹಿತಿ ನೀಡಿದ್ದಾರೆ. 

Advertisement

ಸದ್ಯ ಮದ್ಯ, ಮಾಂಸ ಮಾರಾಟ ಕೇವಲ ಅಯೋಧ್ಯೆ ನಗರ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ. ಬೇರೆ ಬೇರೆ ಸ್ಥಳಗಳಿಂದ ಆಗಮಿಸಿರುವ ಸಾಧು-ಸಂತರು ಎರಡೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿಷೇಧಕ್ಕೆ ಒತ್ತಾಯಿಸಿದ್ದರು. ಜತೆಗೆ ಶ್ರೀಕೃಷ್ಣನ ಜನ್ಮ ಸ್ಥಾನ ಮಥುರಾ ಮತ್ತು ಅಯೋಧ್ಯೆಯನ್ನು ಪವಿತ್ರ ಕ್ಷೇತ್ರಗಳು ಎಂದು ಪ್ರಕಟಿಸಬೇಕು ಎಂದು ಮನವಿ ಮಾಡಿದ್ದರು. ಹೀಗೆ ಘೋಷಣೆ ಮಾಡಿದ ಕೂಡಲೇ ಎರಡೂ ಸ್ಥಳಗಳಲ್ಲಿ ಮಾಂಸಾಹಾರ, ಮದ್ಯದ ಮೇಲೆ ನಿಷೇಧ ಹೇರಿದಂತಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ.

ಮಥುರಾ ಜಿಲ್ಲೆಯ ವೃಂದಾವನ, ಗೋವರ್ಧನ, ಬರ್ಸಾನಾಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಈ ಸ್ಥಳಗಳು ಸಪ್ತ ಕೋಶಿ ಪರಿಕ್ರಮ ಮಾರ್ಗದ ವ್ಯಾಪ್ತಿಯಲ್ಲಿ ಬರುತ್ತದೆ ಎಂದಿದ್ದಾರೆ. ಮಥುರಾ ಜಿಲ್ಲೆಯಾದ್ಯಂತ ನಿಯಮ ಜಾರಿಯಾಗಲಿದೆಯೇ ಎಂದು ಪ್ರಶ್ನಿಸಿದಾಗ ನಿಷೇಧಕ್ಕಾಗಿ ಕೆಲವೊಂದು ಭೌಗೋಳಿಕ ಗುರುತುಗಳನ್ನು ಮಾಡಬೇಕಾಗುತ್ತದೆ ಎಂದು ಸಚಿವ ಶ್ರೀಕಾಂತ್‌ ಶರ್ಮಾ ಹೇಳಿದ್ದಾರೆ.

ಫೈಝಾಬಾದ್‌ ಜಿಲ್ಲೆಯನ್ನು ಅಯೋಧ್ಯೆ ಎಂದು ಮರು ನಾಮಕರಣಗೊಳಿಸುವ ನಿರ್ಧಾ ರದ ಕುರಿ ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನ.6ರಂದು ಘೋಷಣೆ ಮಾಡಿದ್ದರು. ಬಳಿಕ ಪ್ರಮುಖ ಸಂತರಾದ ಸತ್ಯೇಂದ್ರ ನಾಥ್‌ ಅವರು ಅಯೋಧ್ಯೆ ಜಿಲ್ಲೆಯಾದ್ಯಂತ ಮದ್ಯ, ಮಾಂಸ ನಿಷೇಧಕ್ಕೆ ಒತ್ತಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next