Advertisement

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

01:18 AM Dec 23, 2024 | Team Udayavani |

ಅಯೋಧ್ಯೆ: ಇಲ್ಲಿನ ರಾಮಮಂದಿರಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ 1 ವರ್ಷ ತುಂಬಿದ ಹಿನ್ನೆಲೆಯಲ್ಲಿ ಜ.11ರಿಂದ 3 ದಿನಗಳ ವಿಶೇಷ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತೀಯ ಪಂಚಾಂಗದ ಪ್ರಕಾರ ಜ.11ಕ್ಕೆ (ಪುಷ್ಯ ಶುಕ್ಲ ದ್ವಾದಶಿ) ಮಂದಿರ ಉದ್ಘಾಟನೆ ಯಾಗಿ 1 ವರ್ಷ ತುಂಬಲಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌, ಜ.11ರಂದು ಮ.12.20ಕ್ಕೆ ಬಾಲ ರಾಮನ ಮೂರ್ತಿಗೆ ವಿಶೇಷ ಪೂಜೆ ಮತ್ತು ಆರತಿ ಮಾಡುವ ಮೂಲಕ 3 ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡ ಲಾಗುತ್ತದೆ. ಈ ಬಾರಿ ಕಾರ್ಯಕ್ರಮದಲ್ಲಿ ಸಾಮಾನ್ಯ ಜನರಿಗೂ ಭಾಗಿಯಾಗಲು ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.

ಉದ್ಘಾಟನೆಗೆ ಬರದವರಿಗೆ ಆಹ್ವಾನ: ರಾಮಮಂದಿರ ಉದ್ಘಾಟನೆಗೆ ಬರದ ಸಂತರು ಮತ್ತು ಗಣ್ಯರಿಗೆ ಈಗ ಆಹ್ವಾನ ನೀಡಲಾಗುತ್ತದೆ. ಒಟ್ಟು 5 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮೊದಲ ಕಾರ್ಯಕ್ರಮ ಮಂದಿರದಲ್ಲಿ, 2 ಮತ್ತು 3ನೇ ಕಾರ್ಯಕ್ರಮ ಯಜ್ಞ ಮಂಟಪ ದಲ್ಲಿ, 4 ಮತ್ತು 5ನೇ ಕಾರ್ಯಕ್ರಮ ಅಂಗದ್‌ ತಿಲಾದಲ್ಲಿ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next