ಶಿವಮೊಗ್ಗ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್ ಶುರುವಾಗಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಪರೋಕ್ಷಾಗಿ ಟಾಂಗ್ ಕೊಟ್ಟು ಪರಿಷತ್ ಸದಸ್ಯ ಆಯನೂರು ಮಂಜುನಾತ್ ಫ್ಲೆಕ್ಸ್ ಹಾಕಿಸಿದ್ದು, ನಗರದಲ್ಲಿ ಜನರು ಮಾತನಾಡುವಂತಾಗಿದೆ.
ಎಂಎಲ್ ಸಿ ಆಯನೂರು ಮಂಜುನಾಥ್ ಅವರು ಯುಗಾದಿ ಹಾಗೂ ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್ ಹಾಕಿಸಿದ್ದಾರೆ. ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ.., ಮುರಿದ ಮನಸುಗಳ ಬೆಸುಗೆಯಾಗಲಿ. ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲಿ ಎಂದು ಫ್ಲೆಕ್ಸ್ ನಲ್ಲಿ ಬರೆಸಿದ್ದು, ಇದು ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ
ಶಿವಮೊಗ್ಗ ನಗರದ ಎಲ್ಲೆಡೆ ಫ್ಲೆಕ್ಸ್ ಹಾಕಿಸಿಲಾಗಿದೆ. ಆಯನೂರು ಮಂಜುನಾಥ್.ಈ ಹಿಂದಿನಿಂದಲೂ ಈಶ್ವರಪ್ಪ ವಿರುದ್ಧ ಸಮರ ಸಾರಿಕೊಂಡು ಬರುತ್ತಿದ್ದಾರೆ. ಈ ಹಿಂದೆಯೂ ಫ್ಲೆಕ್ಸ್ ಹಾಕಿ ಈಶ್ವರಪ್ಪಗೆ ಪರೋಕ್ಷವಾಗಿ ಕುಟುಕಿದ್ದರು.
Related Articles
ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಆಯನೂರು ಮಂಜುನಾಥ್ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ.