Advertisement

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

01:05 PM Mar 23, 2023 | keerthan |

ಶಿವಮೊಗ್ಗ: ಪಕ್ಷ ನನಗೆ ಎಲ್ಲಾ ಅವಕಾಶವನ್ನು ಮಾಡಿ ಕೊಟ್ಟಿದೆ. ಎಲ್ಲಾ ಸದನಕ್ಕೂ ಹೋಗಿ ಬಂದಿದ್ದೇನೆ. ನನಗೆ ಟಿಕೆಟ್ ಕೇಳುವ ಹಕ್ಕಿಲ್ಲವೇ? ಈ ಹಿಂದೆ ಹೊಸನಗರ ಕ್ಷೇತ್ರದಲ್ಲೂ ಸ್ಫರ್ಧಿಸಿ, ಶಾಸಕನಾಗಿ ಕೆಲಸ ಮಾಡಿದ್ದೆ. ಪಕ್ಷ ಹೇಳಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೆ. ಬಂಗಾರಪ್ಪನವರ ವಿರುದ್ದ ಪಕ್ಷದಿಂದ ಸ್ಫರ್ಧಿಸಿ, ಲೋಕಸಭೆಗೆ ಹೋಗಿದ್ದೆ. ಪಕ್ಷ ಹೇಳಿದಂತೆ ಮಾಡಿದ್ದೇನೆ. ಬರೀ ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೇ ಗೂಟ ಹೊಡೆದುಕೊಂಡು ಕೂತಿಲ್ಲ ಎಂದು ವಿಧಾನ ಪರಿಷತ್ ಬಿಜೆಪ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಶಿವಮೊಗ್ಗ ನನಗೆ ಕಾರ್ಯಕ್ಷೇತ್ರ. ಇಲ್ಲೊಂದು ಅವಕಾಶ ಕೊಡಿ ಎಂದು ಕೇಳಿದರೆ ಎಷ್ಟೊಂದು ಅಸಹಿಷ್ಣುತೆ? ನನ್ನ ರೀತಿಯಲ್ಲಿ ಈಶ್ವರಪ್ಪನವರಿಗೂ ಪಕ್ಷ ಅವಕಾಶ ನೀಡಿದೆ. ಸೋತಾಗಲೂ ಪರಿಷತ್ ಸದಸ್ಯರಾಗಿದ್ದಾರೆ. ಪರಿಷತ್ ವಿಪಕ್ಷ ನಾಯಕರು ಕೂಡ ಅಗಿದ್ದರು‌. ಸಿದ್ದರಾಮಣ್ಣ, ಭಾನುಪ್ರಕಾಶ್, ಗಿರೀಶ್ ಪಟೇಲ್ ರಂತಹ ಹಲವು ನಾಯಕರು ಇದ್ದಾರೆ. 32 ವರ್ಷಗಳ ಬಳಿಕ ತಮ್ಮ ಮಗನಿಗೆ ಕೇಳಿದರೆ ಯಾರಿಗೂ ಕೋಪ ಇಲ್ಲ, ನಾನು ಕೇಳಿದ್ದಕ್ಕೆ ಟೀಕೆ ಹೊರಬರುತ್ತಿದೆ ಎಂದರು.

ಸಾಮಾಜಿಕ, ಸಂಘಟನಾತ್ಮಕ ಸಂಕೋಚ ಇಲ್ಲದೇ ಕೇಳಿದ್ದಾರೆ ಎಂದು ಹೇಳಿದ್ದೇನೆ. ಶಾಸಕನಾದಾಗ ಸದನದಲ್ಲಿ ಘಟಾನುಘಟಿಗಳ ನಡುವೆ ಅತ್ಯುತ್ತಮ ಸಂಸದೀಯ ಪಟು ಎಂದು ಪ್ರಶಸ್ತಿ ಪಡೆದಿದ್ದೆ‌. ಬಾಯಿ ಬಿಡದವರ ನಡುವೆ, ಬಿಟ್ಟರೇ ಅನಾಹುತ ಸೃಷ್ಟಿಸವವರ ನಡುವೆ ಉತ್ತಮ ಕೆಲಸ ಮಾಡಿದ್ದೇನೆ. ನನ್ನ ಹೋರಾಟ ಅರ್ಥ ಮಾಡಿಕೊಳ್ಳದ, ಬಿಸ್ಕೆಟ್ ಗಾಗಿ ಬದುಕುವವರಿಗೆ ನಾನು ಉತ್ತರ ಕೊಡಬೇಕಿಲ್ಲ. ಅತ್ಯಂತ ಅಶ್ಲೀಲವಾಗಿ ಮಾತನಾಡೋ ಕೆಲಸ ಬಿಡಿ. ಮೋದಿಯವರ ಆಶಯದಂತೆ ಮಾತನಾಡೋ ಕೆಲಸ ನಾನು ಮಾಡಿದ್ದೇನೆ. ಮೋದಿ ಗೆ ಜೈ ಅಂದು, ಅವರ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಿದರೆ, ಅವರೇ ಪಕ್ಷ ಹಾಗೂ ಮೋದಿ ವಿರೋಧಿಯಾಗುತ್ತಾರೆ. ಆರ್ ಎಸ್ ಎಸ್ ಹಿರಿಯ ನಾಯಕರ ಆಶಯವು ಇದೆಯಾಗಿದೆ. ನನಗೆ ಈ ಬಾರಿಯಪಕ್ಷ ಅವಕಾಶ ಕೊಡುತ್ತದೆ ಎಂದರು.

ಇದನ್ನೂ ಓದಿ:Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

ಶಿವಮೊಗ್ಗದ ಶಾಂತಿ ಅಪಹಾಸ್ಯದ, ಮನೋರಂಜನೆ ವಸ್ತುವಾಗುತ್ತಿರುವುದು ಬೇಸರ ತರಿಸಿದೆ. ಕೆಲವರು ನನ್ನನ್ನು ನಿತ್ಯ ಸುಮಂಗಲಿಗೆ ಹೋಲಿಸಿದ್ದಾರೆ. ಯಾರು ನಿತ್ಯ ಸುಮಂಗಲಿ ಬಯಸಿ, ಆಗುವುದಿಲ್ಲ, ಸಮಾಜ ಅವರನ್ನು ಹಾಗೇ ಮಾಡುತ್ತದೆ. ಜನ ಸಾಮಾನ್ಯರ ಬದುಕಿಗಾಗಿ ನಾನೋರ್ವ ಜನಪ್ರತಿನಿಧಿಯಾಗಿ ನಿತ್ಯ ಸುಮಂಗಲಿಯಾಗಲು ಸಿದ್ದನಿದ್ಧೆನೆ. ವಿದ್ಯಾರ್ಥಿ ಜೀವನದಲ್ಲೇ ಹೋರಾಟ ಮಾಡಿ, ಜೈಲಿಗೆ ಬಂದವನು ನಾನು. ನಾನೋಂದು ಸೀಟ್ ಕೇಳಿದರೇ, ಇಷ್ಟೋಂದು ಕೆಳಮಟ್ಟದ ಕಮೆಂಟ್ ಗಳೇ ಎಂದು ಬೇಸರ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next