Advertisement

ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ

01:50 PM Oct 28, 2020 | Suhan S |

ಗುಡಿಬಂಡೆ: ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ 112 ಸಹಾಯವಾಣಿ ಪ್ರಾರಂಭವಾಗಿದೆ. ಇನ್ಮುಂದೆ ಸಾರ್ವಜನಿಕರು ತುರ್ತು ಕರೆ ಮಾಡಿ ವೈದ್ಯಕೀಯ, ಪೊಲೀಸ್‌, ಆ್ಯಂಬುಲೆನ್ಸ್‌, ಅಗ್ನಿಶಾಮಕ ನೆರವು ಪಡೆಯಲು 112 ಸಂಖ್ಯೆಗೆ ಕರೆ ಮಾಡಿ ಎಂದು ಗುಡಿಬಂಡೆ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಗೋಪಾಲರೆಡ್ಡಿ ಹೇಳಿದರು.

Advertisement

ಪಟ್ಟಣದ ತಾಲೂಕು ಆಸ್ಪತ್ರೆ ಮುಂದೆ 112 ಬಗ್ಗೆ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಆರಂಭಿಕ ಹಂತ  ದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಿ, ಅಪರಾಧಗಳನ್ನು ತಡೆಗಟ್ಟುವ ಉದ್ದೇಶ ಹೊಂದಲಾಗಿದೆ. ಒಂದು ವಾಹನದಲ್ಲಿ ಮೂವರು ಪೊಲೀಸ್‌ ಸಿಬ್ಬಂದಿ ಇರುತ್ತಾರೆ. ಎಲ್ಲ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸುವರು. ವಾರ್ಡ್‌ ಬೀಟ್‌ಗಳಲ್ಲಿ 112 ತುರ್ತು ಸೇವೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಿಬ್ಬಂದಿ ನೀಡಬೇಕು ಎಂದು ತಾಕೀತು ಮಾಡಿದರು.

ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಲು, ಆಸ್ತಿ ಪಾಸ್ತಿ, ತಮ್ಮ ರಕ್ಷಣೆ, ಆರೋಗ್ಯ, ಪ್ರಾಣಹಾನಿ, ಅಪಘಾತ ಸೇರಿದಂತೆ ಯಾವುದೇ ಸಮಸ್ಯೆಗೆ ತಕ್ಷಣ ಪೊಲೀಸ್‌ ಸಹಾಯ ಬೇಕಿದ್ದಲ್ಲಿ 112 ಸಂಖ್ಯೆಗೆ ಕರೆ ಮಾಡಬಹುದು ಎಂದರು.

ತಾಲೂಕು ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ ಮಾತನಾಡಿದರು. 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಬಗ್ಗೆ ಬ್ಯಾನರ್‌ಗಳನ್ನು ಪಟ್ಟಣದ ಮುಖ್ಯರಸ್ತೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ

ಜಾಥಾ ನಡೆಸಿದರು. ವೈದ್ಯ ಡಾ.ಅಕ್ಷಯ್‌, ಪೊಲೀಸ್‌ ಸಿಬ್ಬಂದಿ ಆನಂದ್‌, ದಕ್ಷಿಣಾ ಮೂರ್ತಿ, ಕುಮಾರ ನಾಯಕ, ಆಟೋ ಮಾಲಿಕರು, ಚಾಲಕರು ಭಾಗವಹಿಸಿದ್ದರು.

Advertisement

ಮನೆಗಳಲ್ಲಿ ಬಚ್ಚಲುಗುಂಡಿ ನಿರ್ಮಿಸಲು ಸಲಹೆ :

ಪಾತಪಾಳ್ಯ: ಉತ್ತಮ ಆರೋಗ್ಯ ಹಾಗೂ ಗ್ರಾಮ ನೈರ್ಮಲ್ಯ ಕಾಪಾಡಲು ಪ್ರತಿಯೊಬ್ಬರೂ ಮನೆಗಳಲ್ಲಿ ಬಚ್ಚಲುಗುಂಡಿ ನಿರ್ಮಿಸಿ ಕೊಳ್ಳಬೇಕೆಂದು ಇಒ ಎಚ್‌.ಎ. ಮಂಜುನಾಥಸ್ವಾಮಿ ತಿಳಿಸಿದರು.

ಪೋಲನಾಯಕನಪಲ್ಲಿ ಗ್ರಾಪಂನ ಹೊಸಹುಡ್ಯ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಫ‌ಲಾನುಭವಿ ನಿರ್ಮಿಸಿಕೊಂಡಿದ್ದ ಸೋಕ್‌ಫಿಟ್‌(ಬಚ್ಚಲುಗುಂಡಿ) ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದರು.

ಮನೆಯ ನೀರು ಮನೆಯ ಸುತ್ತ  ಮುತ್ತಲೂ ಹರಿಯಲು ಬಿಡದೆ ಮನೆಯಲ್ಲಿಯೇ ಇಂಗು ಗುಂಡಿ ನಿರ್ಮಿಸಿಕೊಂಡಲ್ಲಿ ಇದರ ನಿರ್ಮಾಣ ವೆಚ್ಚಕ್ಕಾಗಿ ಸರ್ಕಾರ 14 ಸಾವಿರ ರೂ. ಅನುದಾನ ನೀಡುತ್ತದೆ. ಪ್ರತಿಯೊಬ್ಬರೂ ಬಚ್ಚಲುಗುಂಡಿ ನಿರ್ಮಾಣ ಮಾಡುವುದರಿಂದ ಜಲ ಮರುಪೂರ್ಣ ಗೊಳ್ಳಲಿದೆ. ಸ್ವಚ್ಛತೆಗೆ ಆದ್ಯತೆ ನೀಡಿ ಸೊಳ್ಳೆ, ನೊಣಗಳು

ಬಾರದಂತೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು. ಎ.ಡಿ.ಜಿ. ನಾರಾಯಣ, ಪಿಡಿಒ ಅಯೂಬ್‌ಪಾಷಾ, ಕಾರ್ಯದರ್ಶಿ ವೆಂಕಟರವಣಪ್ಪ, ಕರವಸೂಲಿಗಾರ ಎ.ರಾಜಶೇಖ ರರಾವ್‌ ಹಾಗೂ ಗ್ರಾಮಸ್ಥರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next