ಮದ್ದೂರು: ವಾಹನ ಸವಾರರು ರಸ್ತೆಸುರಕ್ಷತಾ ನಿಯಮಗಳನ್ನು ಅನುಸರಿಸ ಬೇಕೆಂದು ಮದ್ದೂರು ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್ ತಿಳಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿದ್ದಸವಾರರಿಗೆ ದಂಡ ವಿಧಿಸಿ-ಹೆಲ್ಮೆಟ್‌ಖರೀದಿಸಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಜರುಗುತ್ತಿರುವುದರಿಂದ ಸಾವು ನೋವುಸಂಭವಿಸುತ್ತಿವೆ. ದ್ವಿಚಕ್ರ ವಾಹನ ಸವಾರರುಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಜತೆಗೆಸುರಕ್ಷತಾ ನಿಯಮ ಹಾಗೂ ಕೊರೊನಾಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹೇಳಿದರು.
ಪಟ್ಟಣ ವ್ಯಾಪ್ತಿಯಲ್ಲಿ ಧ್ವನಿ ವರ್ಧಕದ ಮೂಲಕ ಹೆಲ್ಮೆಟ್ ಧರಿಸುವಂತೆ ಜಾಗೃತಿಮೂಡಿಸಿದ್ದರೂ ಕೆಲ ಸವಾರರು ಹಾಗೂ ಯುವಕರು ಹೆಲ್ಮೆಟ್ ಧರಿಸದೆ ವಾಹನಚಾಲನೆ ಮಾಡುವ ಜತೆಗೆ ಮದ್ಯಪಾನ, ಅಡ್ಡದಿಡ್ಡಿಯಾಗಿ ಬೈಕ್‌ರೈಡಿಂಗ್ ಪ್ರಕರಣ ದಿಂದಾಗಿ ಹೆಚ್ಚು ಸಾವು ನೋವು ಸಂಭವಿಸುತ್ತಿರುವುದರಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದರು.
ಪಟ್ಟಣದ ಪ್ರವಾಸಿಮಂದಿರ, ಕೆಮ್ಮಣ್ಣು ನಾಲೆ, ತಾಪಂ ಕಚೇರಿ ವೃತ್ತದ ಬಳಿ ಹೆಲ್ಮೆಟ್‌ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದಸವಾರರಿಗೆ ಹೆಲ್ಮೆಟ್ ಖರೀದಿಸುವಂತೆಪ್ರೇರೇಪಿಸುವ ಜತೆಗೆ ತಾವೇ ಹೆಲ್ಮೆಟ್ ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಮದ್ದೂರು ಪಿಎಸ್‌ಐ ನವೀನ್‌ಗೌಡ,ಎಎಸ್‌ಐ ಮಹದೇವಪ್ಪ, ಶೇಖರ್, ಸಿಬ್ಬಂದಿ ಇದ್ದರು.