Advertisement

ಗುಲಾಬಿ ನೀಡಿ ಹೆಲ್ಮೆಟ್‌ ಧರಿಸಲು ಜಾಗೃತಿ

04:20 PM Feb 21, 2021 | Team Udayavani |

ಹುಳಿಯಾರು: ಹುಳಿಯಾರಿನಲ್ಲಿ ಅಪರಾಧ ಮಾಸಾಚರಣೆ ಅಂಗವಾಗಿ ಪೊಲೀಸ್‌ ಠಾಣೆ ಎದುರಿನ ನ್ಯಾಷನಲ್‌ ಹೈವೆಯಲ್ಲಿ ವಾಹನ ಸವಾರರಿಗೆ ಪೊಲೀಸರು ಗುಲಾಬಿ ಹೂ ನೀಡಿಹೆಲ್ಮೆಟ್‌ ಧರಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು.

Advertisement

ಹುಳಿಯಾರು ಪಿಎಸ್‌ಐ ಕೆ.ಟಿ. ರಮೇಶ್‌ ಮಾತನಾಡಿ, ಹೆಲ್ಮೆಟ್‌ ಇಲ್ಲದೆ ಬೈಕ್‌ ಸಂಚಾರ ಮಾಡುವುದರಿಂದ ಅಪಘಾತ, ಸಾವು-ನೋವು ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಗಟ್ಟುವ ದಿಸೆಯಲ್ಲಿಸಾರ್ವಜನಿಕರಿಗೆ ಹೆಲ್ಮೆಟ್‌ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮೊದಲಿಗೆ ಗುಲಾಬಿ ನೀಡಿ ಹೆಲ್ಮೆಟ್‌ ಧರಿಸಿಸಂಚರಿಸುವಂತೆ ಬುದ್ಧಿ ಮಾತು ಹೇಳಲಾಗುವುದು. ನಂತರ ತಪಾಸಣಾ ಸ್ಥಳದಲ್ಲೇ ಹೆಲ್ಮೆಟ್‌ ಖರೀದಿಸಲು ಅವಕಾಶ ಕೊಡಲಾಗುವುದು. ಕೊನೆಗೆ ಕಡ್ಡಾಯವಾಗಿ 500 ರೂ. ದಂಡ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಅಪಘಾತ ಸಂಭವಿಸಿದ ವೇಳೆ ಒಂದೊಂದು ಸಮಯದಲ್ಲಿ ಸ್ಥಳದಲ್ಲಿಪೊಲೀಸ್‌ ಅಧಿಕಾರಿಗಳು ಲಭ್ಯವಿರುವುದಿಲ್ಲ. ಅದೇ ಕಾರಣಕ್ಕಾಗಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಲು112 ಸಂಖ್ಯೆಗೆ ಕರೆ ಮಾಡಿದರೆ ಸಾಕು.ಕೆಲವೇ ಕ್ಷಣದಲ್ಲಿ ತಾವಿದ್ದ ಸ್ಥಳಕ್ಕೆ 112 ವಾಹನ ಜೊತೆ ಸಿಬ್ಬಂದಿ ತಮ್ಮನ್ನು ರಕ್ಷಿಸಲು ಬರಲಿದ್ದಾರೆ ಎಂದರು.

ಇದಲ್ಲದೇ ತೊಂದರೆಯಲ್ಲಿರುವ ಸಾರ್ವಜನಿಕರಿಗೆ ತುರ್ತುಪರಿಸ್ಥಿತಿಯಲ್ಲಿರುವಾಗ ತಕ್ಷಣ ಸ್ಪಂದಿಸುವಸಲುವಾಗಿ ರಾಜ್ಯ ಸರ್ಕಾರ ಒಂದೇ ದೇಶ ಒಂದೇ ರಸ್ತೆ ಕರೆ ಸಂಖ್ಯೆ 112 ಈಸೇವೆಯನ್ನು ಜಾರಿಗೆ ತಂದಿದ್ದಾರೆ.ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಹಂದನಕೆರೆ ಪಿಎಸ್‌ಐ ಶಿವಪ್ಪ, ಚಿಕ್ಕನಾಯಕಹಳ್ಳಿ ಪಿಎಸ್‌ಐ ಹರೀಶ್‌, ಹುಳಿಯಾರು ಎಎಸ್‌ಐ ಆನಂದಪ್ಪ ಮತ್ತು ನಂಜೇಗೌಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next